alex Certify ದಾರಿ ತಪ್ಪಿದ ಪ್ರೀತಿ, ಪರಪುರುಷನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ -ದುಡುಕಿದ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪ್ರೀತಿ, ಪರಪುರುಷನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ -ದುಡುಕಿದ ಪ್ರೇಮಿ

ಚಿತ್ರದುರ್ಗ: ಪ್ರೀತಿಸಿ ಮದುವೆಯಾದ ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಂಗನಾಥಪುರ 30 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡವ ಎನ್ನಲಾಗಿದೆ.

ಈ ಹಿಂದೆ ಎರಡು ಮದುವೆಯಾಗಿದ್ದ ಲಕ್ಷ್ಮೀಪುರದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ ಯುವಕ ನಾಯಕನಹಟ್ಟಿ ದೇವಾಲಯದಲ್ಲಿ ಆಕೆಯನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ. ಆಕೆಯನ್ನು ಖುಷಿಯಾಗಿಡಲು ಸಾಲ ಮಾಡಿದ್ದ. ಜಮೀನು ಕೂಡ ಮಾರಿಕೊಂಡಿದ್ದ ಎನ್ನಲಾಗಿದೆ.

ಕೊನೆಗೆ ಮಹಿಳೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿರುವುದು ತಿಳಿದ ಯುವಕ ಬೇಸರಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಜೊತೆಗಿರುವ ಫೋಟೋ, ವಾಟ್ಸಾಪ್ ಚಾಟ್, ವಿಡಿಯೋ ಕಾಲ್ ಫೋಸ್ಟ್ ಮಾಡಿ ಸ್ನೇಹಿತನಿಗೆಗೆ ಮಾಹಿತಿ ನೀಡಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...