ಚಿಕ್ಕಮಗಳೂರು: ಹಿಂದೂ, ಮುಸ್ಲಿಂ ಜೋಡಿ ಮದುವೆಗೆ ಅಡ್ಡಿಪಡಿಸಿದ ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಮದುವೆ ನೋಂದಣಿಗಾಗಿ ಹಿಂದೂ, ಮುಸ್ಲಿಂ ಯುವಕ -ಯುವತಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು, ಇದು ಲವ್ ಜಿಹಾದ್ ಎಂದು ಅವರಿಗೆ ಅಡ್ಡಿಪಡಿಸಿದ ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ ಪರಸ್ಪರ ಪ್ರೀತಿಸಿದ್ದು, ಎರಡೂ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಯುವಕ ಹಾಗೂ ಯುವತಿ ಮದುವೆ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದ ವೇಳೆ ಹಿಂದೂ ಸಂಘಟನೆಯ ಯುವಕರು ಮದುವೆ ತಡೆದು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಸ್.ಡಿ.ಪಿ.ಐ. ಮತ್ತು ದಲಿತ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದು, ಪೊಲೀಸರು ಯುವತಿಯ ತಾಯಿಯನ್ನು ಕರೆಸಿ ವಿಚಾರಿಸಿದಾಗ ಮದುವೆಗೆ ಎರಡು ಮನೆಯವರ ಒಪ್ಪಿಗೆ ಇದೆ ಎಂದು ತಾಯಿ ತಿಳಿಸಿದ್ದು, ನಂತರ ಮದುವೆಗೆ ಅಡ್ಡಿಪಡಿಸಿದವರ ಮೇಲೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.