
ದೃಶ್ಯಾವಳಿಗಳು ಶೀಘ್ರವಾಗಿ ವೈರಲ್ ಆಗಿದ್ದು, ಘಟನೆಯನ್ನು ಖಂಡಿಸಿರುವ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಲ್ಲದೇ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ (HRCE) ಅಧಿಕಾರಿಗಳ ದಕ್ಷತೆಯನ್ನು ಪ್ರಶ್ನಿಸಿದ್ದಾರೆ. ಇಂತಹ ಕ್ರಮಗಳು ಹಿಂದೂ ಪೂಜಾ ಸ್ಥಳಗಳ ಪಾವಿತ್ರ್ಯತೆ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡಬಹುದು ಎಂದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಿ ಕಪಾಲೀಶ್ವರ ದೇವಸ್ಥಾನದ ಆವರಣದ ಫೋಟೋ ಮತ್ತು ವೀಡಿಯೊ ಚಿತ್ರೀಕರಿಸಿದ ಅಪರಿಚಿತ ಮುಸ್ಲಿಂ ಯುವತಿ ವಿರುದ್ಧ ಹಿಂದೂ ಮುನ್ನಾನಿ ಔಪಚಾರಿಕ ದೂರು ದಾಖಲಿಸಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
“ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯೊಬ್ಬರು ಚೆನ್ನೈನ ಮೈಲಾಪುರದ ಕಪಾಲೀಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಫೋಟೋ ಮತ್ತು ವೀಡಿಯೊ ತೆಗೆದುಕೊಂಡಿದ್ದಾರೆ. ಬೇರೆ ಧರ್ಮದವರಿಗೆ ದೇವಸ್ಥಾನ ಪ್ರವೇಶಿಸಲು ಹೇಗೆ ಅವಕಾಶ ಕೊಟ್ಟರು ಮತ್ತು ಆಕೆಯನ್ನು ತಡೆಯಲು ಭದ್ರತಾ ಸಿಬ್ಬಂದಿ ಏಕೆ ವಿಫಲರಾದರು ? ಕೆಲವು ತಿಂಗಳ ಹಿಂದೆ, ಕ್ರಿಶ್ಚಿಯನ್ ಮಹಿಳೆಯೊಬ್ಬರು ದೇವಾಲಯದ ಒಳಗೆ ಬೈಬಲ್ ಓದುತ್ತಿರುವುದು ಕಂಡುಬಂದಿತ್ತು. ಅವರು ಧ್ವಜಸ್ತಂಭದ ಬಳಿ ಮೇರಿ ಮತ್ತು ಶಿಲುಬೆಯನ್ನು ಸಹ ಇರಿಸಿದ್ದಾರೆ ” ಎಂದು ಸಂಘಟನೆ ಹೇಳಿದೆ.
”ದೇವಸ್ಥಾನದ ಆದಾಯದಿಂದ ಸಂಬಳ ಪಡೆದು ದೇವಸ್ಥಾನಕ್ಕೆ ಸೂಕ್ತ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ದತ್ತಿ ಇಲಾಖೆ ಹೇಳಿದರೆ, ದತ್ತಿ ಇಲಾಖೆಯು ದೇವಸ್ಥಾನವನ್ನು ತೊರೆಯಬೇಕು. ಇಷ್ಟೆಲ್ಲಾ ಅಕ್ರಮ ನಡೆದರೂ ಪೊಲೀಸರಿಗೆ ಒಂದೇ ಒಂದು ದೂರು ನೀಡದ ದತ್ತಿ ಇಲಾಖೆ, ನಮ್ಮ ದೇವಸ್ಥಾನಗಳನ್ನು ಹೇಗೆ ರಕ್ಷಿಸುತ್ತೀರಿ ? ದೇವಾಲಯದ ರಕ್ಷಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಹಿಂದೂಗಳು ನೇರವಾಗಿ ದೇವಾಲಯವನ್ನು ರಕ್ಷಿಸಲು ಹಿಂಜರಿಯುವುದಿಲ್ಲ ಎಂದು ನಾವು ಸೂಚಿಸುತ್ತೇವೆ. ” ಎಂದು ಎಚ್ಚರಿಸಿದೆ.
நேற்று மயிலை கபாலீஸ்வரர் ஆலயத்தில் ஹிஜாப் அணிந்த முஸ்லிம் பெண் சுமார் 1மணி நேரம் அங்கு இருந்து வீடியோ எடுத்துள்ளார்.கேள்வி கேட்க கூட ஆளில்லை. கோயிலை காக்க வக்கற்ற ஆலய நிர்வாகம்.கோயில் காட்சி பொருள் இல்லை வெறும் சுற்றிப் பார்க்க!@hindumunnani_tn @kannan_kanal @ManaliManoharHM pic.twitter.com/xnRg7ntFUc
— A.T.Elangovan (@elangovan_HM) November 14, 2024
மைலாப்பூர் கபாலீஸ்வரர் கோயிலில் ஹிஜாப்
அணிந்து நடமாடிய இஸ்லாமிய பெண்..?ஹிஜாப் அணிந்த பெண் செல்ஃபோன் மூலம்
அம்மன் சந்நிதி உள்ளிட்ட முக்கிய பகுதிகளை
வீடியோ எடுத்ததால் பரபரப்பு.!பொதுமக்கள் அளித்த புகாரின் மீது காவலாளிகள் நடவடிக்கை எடுக்கவில்லை எனக் குற்றச்சாட்டு
சம்பவத்திற்கு… pic.twitter.com/SQfkyl7saO
— Tamil Janam (@TamilJanamNews) November 14, 2024