
ರಾಜಸ್ಥಾನ ಮೂಲದ ವಿಜಯಕುಮಾರ್ ಅವರು ಅರೆ ಎಂಬಲ್ಲಿ ಎಲ್ಲಾಕ್ವಾಯ್ ದೇಹತಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದರು. ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಭಯೋತ್ಪಾದಕರು ಬ್ಯಾಂಕಿನ ಕೊಠಡಿಯನ್ನು ಇಣುಕಿ ನೋಡಿದ್ದಾರೆ ಮತ್ತು ಹೊರಗಡೆ ಇದ್ದ ವಿಜಯಕುಮಾರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಭಯಾನಕ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಮೈಜುಮ್ಮೆನ್ನುವಂತೆ ಮಾಡುತ್ತವೆ.