ಧಾರವಾಡ : ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ, ಹಿಂದೂ ಧರ್ಮದಲ್ಲಿ ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ ಎಂದು ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಗದಗ ತೋಂಟದಾರ್ಯ ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾವು ಹಿಂದೂ ವಿರೋಧಿಗಳಲ್ಲ, ಜೈನರು, ಸಿಖ್ರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದರು. ಧರ್ಮ ಎಂದರೆ ಅದರದ್ದೆಯಾದ ಸಂವಿಧಾನ ಇರಬೇಕು ಎಂದಿದ್ದಾರೆ.ಹಿಂದೂ ಧರ್ಮದಲ್ಲಿ ಓರ್ವ ಪ್ರವಾದಿ, ಯಾವುದೇ ನಿರ್ದಿಷ್ಟವಾದ ಗ್ರಂಥ , ನಿರ್ದಿಷ್ಟವಾದ ದೇವರಿಲ್ಲ ಎಂದರು.
ಹಿಂದೂಗಳಲ್ಲಿ ನಿರ್ದಿಷ್ಟವಾದ ದೇವರಿಲ್ಲ , 33 ಕೋಟಿ ದೇವರನ್ನು ಪೂಜಿಸುತ್ತಾರೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಇಲ್ಲ. ನಾವು ಹಿಂದೂ ವಿರೋಧಿಗಳಲ್ಲ, ಜೈನರು, ಸಿಖ್ರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದು ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.