ಬೆಳಗಾವಿ: ಕಲಬುರಗಿ ಕೇಂದ್ರ ಕಾರಾಗ್ರಹದಲ್ಲಿ ಕೈದಿಗಳ ಐಷಾರಾಮಿ ಜೀವನಕ್ಕೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಬೆಳಗಾವಿ ಹಿಂಡಲಗಾ ಜೈಲಿನ ಕರಾಳಮುಖ ಅನಾವರಣಗೊಂಡಿದೆ. ಜೈಲಿನಲ್ಲಿ ಕೈದಿಗಳು ಗಾಂಜಾ, ಸಿಗರೇಟ್, ಬಿಯರ್ ಸೇರಿದಂತೆ ಎಲ್ಲವನ್ನೂ ಹೊರಗಡೆಯಿಂದ ತರಿಸಿಕೊಂಡು ರಾಜಾರೋಷವಾಗಿ ಕಾಲಕಳೆಯುತ್ತಿದ್ದಾರೆ.
ಜೈಲಿನಲ್ಲಿ ಹಣವಿಟ್ಟು ಇಸ್ಪೀಟ್ ಆಡುತ್ತಿದ್ದಾರೆ. ಜೈಲಿನ ಸರ್ಕಲ್ ನಂಬರ್ 2ನೇ ಬ್ಯಾರಕ್ ನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಆರಾಮವಾಗಿ ಕಾಲಕಳೆಯುತ್ತಿದ್ದಾರೆ. ಹಣ ಕೊಟ್ಟರೆ ಕೈದಿಗಳಿಗೆ 20 ಸಾವಿರ ರೂಪಾಯಿಯ ಆಂಡ್ರಾಯ್ಡ್ ಫೋನ್ ಕೂಡ ಸಿಗುತ್ತಿದೆ. ಹಣ ಕೊಟ್ಟರೆ ಜೈಲು ಅಧೀಕ್ಷಕರು ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಜೈಲಿನಲ್ಲಿ ಕೈದಿ ಸುರೇಶ್ ಇಸ್ಪೀಟ್ ಆಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಹಲವರು ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೈದಿಗಳಿಗೆ ಹಿಂಡಲಗಾ ಜೈಲಿನಲ್ಲಿ ಇಷ್ಟೆಲ್ಲ ವ್ಯವಸ್ಥೆಗಳು ಸಿಗುತ್ತಿರುವುದಾದರೂ ಹೇಗೆ ಎಂಬ ಚರ್ಚೆ ಆರಂಭವಾಗಿದೆ.