’ಯೇ ರಿಶ್ತೇ ಕ್ಯಾ ಕೆಹತಾ ಹೈ’ ಧಾರಾವಾಹಿಯಲ್ಲಿ ಅಕ್ಷರಾ ಪಾತ್ರದಿಂದ ಜನಪ್ರಿಯತೆ ಗಿಟ್ಟಿಸಿಕೊಂಡ ಹಿನಾ ಖಾನ್ ಇತ್ತೀಚೆಗೆ ’ಮೈಂ ಭೀ ಬರ್ಬಾದ್’ ಹಾಡಿನಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ.
ಅಂಗದ್ ಬೇಡಿಯೊಂದಿಗೆ ಹಾಡಿನಲ್ಲಿ ಕಾಣಿಸಿಕೊಂಡಿರುವ ಹಿನಾ, ಇಬ್ಬರ ನಡುವಿನ ಕೆಮೆಸ್ಟ್ರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಲಿವುಡ್‌ನಲ್ಲಿ ತಮ್ಮ ಪಯಣ, ರಾಕಿ ಜೈಸ್ವಾಲ್ ಜೊತೆಗಿನ ಸಂಬಂಧ ಹಾಗೂ ವೃತ್ತಿಯಲ್ಲಿ ತಾವು ಕಂಡ ತಿರಸ್ಕಾರಗಳ ಕುರಿತು ಹಿನಾ ಮಾತನಾಡಿದ್ದಾರೆ.
ಪ್ರಾಜೆಕ್ಟ್ ಒಂದರಲ್ಲಿ ಕಾಶ್ಮೀರಿ ಹುಡುಗಿಯ ಪಾತ್ರ ನಿರ್ವಹಿಸಬೇಕಿದ್ದ ತಾವು ತಮ್ಮ ಎಣ್ಣೆಗೆಂಪು ಬಣ್ಣದ ಕಾರಣದಿಂದ ತಿರಸ್ಕೃತರಾದ ಕಥೆ ಹೇಳಿಕೊಂಡಿದ್ದಾರೆ ಹಿನಾ.
“ಕೆಲವೊಮ್ಮೆ ನನಗೆ ಕಥೆ ಇಷ್ಟವಾಗುವುದಿಲ್ಲ ಅಥವಾ ಕೆಲವೊಂದು ಪಾತ್ರಗಳನ್ನು ನಿರ್ವಹಿಸಲು ಇಷ್ಟ ಪಡುವುದಿಲ್ಲ. ಆದರೆ ಕೆಲವೊಮ್ಮೆ ನೀವು ಕೆಲವೊಂದು ಪಾತ್ರಗಳಿಗೆ ಟೆಸ್ಟಿಂಗ್ ಮಾಡಿ, ಕೆಲಸ ಮಾಡಲು ಉತ್ಸುಕರಿರುವಾಗಲೇ ಅನೇಕ ಕಾರಣಗಳಿಂದ ಕೈಗೂಡದೇ ಇರುವ ಸಾಧ್ಯತೆಯೂ ಇರುತ್ತದೆ. ಪ್ರಾಜೆಕ್ಟ್ ಯಾವುದೆಂದು ಹೇಳಲಾರೆ, ಆದರೆ ಕಾಶ್ಮೀರಿ ಹುಡುಗಿಯಂತೆ ಕಾಣದೇ ಇದ್ದ ಕಾರಣಕ್ಕೆ ತಿರಸ್ಕೃತಗೊಂಡಿದ್ದೆ.
ನನಗೆ ಕಾಶ್ಮೀರಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತದೆ ಆದರೆ ತೀರಾ ಬೆಳ್ಳಗೆ ಇರಬೇಕಾಗಿದ್ದ ಕಾರಣ ನನಗೆ ಪಾತ್ರ ಸಿಗಲಿಲ್ಲ. ತಂಡ ಹಾಗೂ ಪಾತ್ರ ಅದನ್ನೇ ಡಿಮ್ಯಾಂಡ್ ಸಹ ಮಾಡಿತ್ತು. ನನಗೆ ನಿಜಕ್ಕೂ ಬೇಸರವಾಯಿತು. ಭಾಷೆ ಚೆನ್ನಾಗಿ ಗೊತ್ತಿದ್ದು, ಆ ಪಾತ್ರದಲ್ಲಿ ಏನೆಲ್ಲಾ ಮಾಡಬಹುದಿತ್ತು,” ಎಂದು ನಕ್ಕು ಹೇಳಿಕೊಂಡಿದ್ದಾರೆ ಹಿನಾ.
https://www.instagram.com/p/CSgWvUIIaz8/?utm_source=ig_embed&ig_rid=337b1dc3-5eaf-4881-aa83-78e883df3f1d