
ಹಿಮಾಚಲ ಪ್ರದೇಶದ ಸಿರ್‌ಮೌರ್ ಜಿಲ್ಲೆಯಲ್ಲಿ ಬೆಟ್ಟದ ಪಕ್ಕದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನೋಡನೋಡುತ್ತಿದ್ದಂತೆ ಕುಸಿದು ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರೀ ಭೂಕುಸಿತವು ಸಿರ್‌ಮೌರ್ ಜಿಲ್ಲೆಯ ದೂರದ ಶಿಲೈ ಉಪ ವಿಭಾಗದಲ್ಲಿರುವ ಕಾಳಿ ಖಾನ್ ಪ್ರದೇಶದಲ್ಲಿ ಸಂಭವಿಸಿದ್ದು, ಈ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಭೂ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 707ಅನ್ನು ಮುಚ್ಚಲಾಗಿದೆ. ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವೀಡಿಯೊದಲ್ಲಿರುವಂತೆ ಬೆಟ್ಟದ ಒಂದು ಭಾಗವು ರಸ್ತೆಯ ಮೇಲೆ ಕುಸಿದು ಬೀಳುತ್ತದೆ. ರಸ್ತೆಯ ಸುಮಾರು 100 ಮೀಟರ್ ಭಾಗ ಏಕಾಏಕಿ ಕೆಳಕ್ಕೆ ಜಾರಿ ಕಣ್ಣು ಮಿಟುಕಿಸುವಷ್ಟರಲ್ಲಿ ಕಣ್ಮರೆಯಾಗಿಬಿಡುತ್ತದೆ.
ಪೈಪ್ ಲೈನ್ ಗೆ ಕನ್ನಹಾಕಿ ಪೆಟ್ರೋಲ್ ಕದ್ದ ಖದೀಮರು….! ಖತರ್ನಾಕ್ ಕಳ್ಳರ ಕೃತ್ಯಕ್ಕೆ ಶಾಕ್ ಆದ ಪೊಲೀಸರು
ಈ ರಸ್ತೆಯು ಪಾವೊಂಟಾ ಸಾಹಿಬ್ ಮತ್ತು ಶಿಲ್ಲೈ-ಹಟ್ಕೋರಿ ಎಂಬ ಎರಡು ಪ್ರದೇಶವನ್ನು ಸಂಪರ್ಕಿಸುತ್ತದೆ.
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಭಾರೀ ಮಳೆಯ ನಂತರ ಅನೇಕ ಜೀವ ಹಾನಿಯಾಗಿದ್ದು ಹಲವಾರು ಆಸ್ತಿಗಳಿಗೆ ಹಾನಿಯಾಗಿದೆ.
ಸಿರ್‌ಮೌರ್ ಭೂಕುಸಿತದ ದೃಶ್ಯಗಳು ನೆಟ್ಟಿಗರನ್ನು ಆಘಾತಕ್ಕೊಳಗಾಗಿಸಿವೆ. ಭಯಾನಕ ಎಂದು ಅನೇಕರು ಪ್ರತಿಕ್ರಿಯಿಸಿ ಗಾಬರಿ ವ್ಯಕ್ತಪಡಿಸಿದ್ದಾರೆ.
ನಾವು ಪ್ರಕೃತಿಯನ್ನು ಪಳಗಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಕಲಿಯಬೇಕಾದ ಪಾಠ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.