ಹಿಮಾಚಲ ಪ್ರದೇಶ ಶಾಸಕ ಸುರೇಂದರ್ ಶೌರಿ ಕಾರು ಕಂದಕಕ್ಕೆ ಉರುಳಿದ್ದು ಪರಿಣಾಮವಾಗಿ ಶಾಸಕ ಶೌರಿ, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಸುರೇಂದರ್ ಶೌರಿ ಕಾರು ಕುಲ್ಲುವಿನ ಬಂಜರ್ ಪ್ರದೇಶದ ಬಹು ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ.
ಕುಲ್ಲು ಎಸ್ಪಿ ಗುರುದೇವ್ ಶರ್ಮಾ ಈ ವಿಚಾರವಾಗಿ ಮಾಹಿತಿಯನ್ನು ನೀಡಿದ್ದು, ಶಾಸಕ ಶೌರಿ ಹಬ್ಬ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅವರ ವಾಹನವು ಕಂದಕಕ್ಕೆ ಉರುಳಿದೆ. ಶಾಸಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಗಾಯಗೊಂಡಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ರು.
ಗಾಯಗೊಂಡ ಮಹಿಳೆಯರು ಹಾಗೂ ಮಕ್ಕಳಿಗೆ ತಲಾ 5000 ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಬಂಜಾರ್ ಕ್ಷೇತ್ರದ ಶಾಸಕ ಹಾಗೂ ನನ್ನ ಕಿರಿಯ ಸಹೋದರ ಶೌರಿ ಕಾರು ಅಪಘಾತಕ್ಕೀಡಾದ ಸುದ್ದಿ ಆಘಾತ ತಂದಿದೆ. ಸುರೇಂದರ್ ಶೌರಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಟ್ವೀಟಾಯಿಸಿದ್ದಾರೆ.