Video: ಹಿಮಾಚಲ ರಾಜ್ಯಪಾಲರ ಬೆಂಗಾವಲು ಪಡೆಯಿಂದ ಸರಣಿ ಅಪಘಾತ 11-12-2024 9:26AM IST / No Comments / Posted In: Latest News, India, Live News ಹಿಮಾಚಲ ಪ್ರದೇಶ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರ ಬೆಂಗಾವಲು ಪಡೆ ವಾಹನದಿಂದ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಲಕ್ನೋದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಬಳಿಕ ರಾಜ್ಯಪಾಲರು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿದ್ದಾರೆಂದು ಮಾಹಿತಿ ನೀಡಿದ್ದಾರೆ. ಶಹೀದ್ ಪಥದ ಲುಲು ಮಾಲ್ ಬಳಿ ಮಂಗಳವಾರ ಬೆಳಗ್ಗೆ 9:30 ರ ಸುಮಾರಿಗೆ ಅಪಘಾತ ಸಂಭವಿಸಿದೆ, ಅಪಘಾತದಿಂದಾಗಿ ಬೆಂಗಾವಲು ವಾಹನ ಹಠಾತ್ತನೆ ನಿಂತುಕೊಂಡಿದ್ದು, ಇದರ ಹಿಂದೆ ಇದ್ದ ಕೆಲ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸುತ್ತಿದ್ದ ಹಲವಾರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಸ್ಥಳದಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಸಂಚಾರ ಸುಗಮವಾಗಿ ಸಾಗುತ್ತಿದೆ ಎಂದು ಸುಶಾಂತ್ ಗಾಲ್ಫ್ ಸಿಟಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲ ಶುಕ್ಲಾ ಅವರು ಬುಧವಾರ ಲಕ್ನೋದಲ್ಲಿ ಸೇಫ್ ಸೊಸೈಟಿ ಆಯೋಜಿಸಿದ್ದ ಸಮಾಗಮ್ 2024 ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶ ರಾಜಭವನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. लखनऊ में एयरपोर्ट से राजभवन की ओर जाते समय हिमाचल प्रदेश के राज्यपाल शिव प्रकाश शुक्ला की फ्लीट के कई वाहन अचानक लूलू मॉल के पास आपस में टकरा गए, गाड़ियों के दुर्घटनाग्रस्त होने के कारण स्टाफ के कई लोग घायल हुए, राज्यपाल की गाड़ी आगे थी, उनके वाहन को कुछ नहीं हुआ… pic.twitter.com/MUHqLqoCCl — Gaurav Kumar (@gaurav1307kumar) December 10, 2024