ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಮೀಸಲಾದ ಸಮೋಸಾ ಮತ್ತು ಕೇಕ್‌ಗಳನ್ನು ಅವರ ಭದ್ರತಾ ಸಿಬ್ಬಂದಿಗೆ ಬಡಿಸಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಈ ಕುರಿತು ಸಿಐಡಿ ತನಿಖೆ ಆರಂಭಿಸಿದೆ.
ಅಕ್ಟೋಬರ್ 21ರಂದು ಮುಖ್ಯಮಂತ್ರಿ, ಸಿಐಡಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಿಐಡಿ ವರದಿಯ ಪ್ರಕಾರ, ಉದ್ದೇಶಿತ ಸಮೋಸಾ ಮತ್ತು ಕೇಕ್ ಗಳನ್ನು ಮುಖ್ಯಮಂತ್ರಿಯವರ ಬದಲಿಗೆ ಸುಖು ಅವರ ಭದ್ರತಾ ಸಿಬ್ಬಂದಿಗೆ ತಪ್ಪಾಗಿ ನೀಡಲಾಗಿದ್ದು, ಆಂತರಿಕ ಸಂವಹನ ಮತ್ತು ಪ್ರೋಟೋಕಾಲ್ ಪಾಲನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ಈ ಸಂದರ್ಭದಲ್ಲಿ ಜವಾಬ್ದಾರಿ ಹೊತ್ತವರು ತಮ್ಮದೇ ಆದ ಅಜೆಂಡಾ ಪ್ರಕಾರ ಕಾರ್ಯನಿರ್ವಹಿಸಿದ್ದಾರೆ ಎಂದು ಸಿಐಡಿಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ನಡೆದ ಘಟನೆಯ ಕುರಿತು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಇದರ ಮಧ್ಯೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಬಿಜೆಪಿ, ಸುಖು ಅವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ಇಲ್ಲ, ಆದರೆ ಅವರ ಏಕೈಕ ಕಾಳಜಿ “ಮುಖ್ಯಮಂತ್ರಿ ಸಮೋಸಾ” ಎಂದು ತೋರುತ್ತದೆ ಎಂದು ವ್ಯಂಗ್ಯವಾಡಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಿಐಡಿ ಪ್ರಧಾನ ಕಚೇರಿಗೆ ತೆರಳಿದ್ದ ಮುಖ್ಯಮಂತ್ರಿಯವರಿಗೆ ಬಡಿಸಲು ಲಕ್ಕರ್ ಬಜಾರ್‌ನ ಹೋಟೆಲ್ ರಾಡಿಸನ್ ಬ್ಲೂನಿಂದ ತಿಂಡಿ ತಿನಿಸುಗಳನ್ನು ತಂದಾಗ ಈ ಘಟನೆ ನಡೆದಿದೆ. ಆದಾಗ್ಯೂ, ಉಪ ಎಸ್ಪಿ ಶ್ರೇಣಿಯ ಅಧಿಕಾರಿ ನಡೆಸಿದ ವಿಚಾರಣೆಯ ವರದಿಯ ಪ್ರಕಾರ, ಸಿಎಂ ಭದ್ರತಾ ಸಿಬ್ಬಂದಿಗೆ ಈ ಆಹಾರ ಪದಾರ್ಥಗಳನ್ನು ನೀಡಲಾಯಿತು.
CID investigating Sukhu ‘s samosas pic.twitter.com/rxXQWM8esz
— Shambhu Shikari (@Shambhu9211) November 8, 2024