ರಜಾ ದಿನಗಳಲ್ಲಿ ಅನೇಕರು ವಿದೇಶಕ್ಕೆ ಹೋಗ್ತಾರೆ. ಆದ್ರೆ ಭಾರತದಲ್ಲಿಯೇ ಸುಂದರ ತಾಣಗಳು ಸಾಕಷ್ಟಿವೆ. ವಿಶೇಷ ಅಂದ್ರೆ ಭಾರತದ ಈ ಸುಂದರ ತಾಣಗಳಿಗೆ ಪ್ರತಿವರ್ಷ ವಿದೇಶಿಗರ ದಂಡೇ ಹರಿದು ಬರುತ್ತೆ. ನೀವೂ ಒಮ್ಮೆ ನಮ್ಮ ದೇಶದ ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ.
ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ಸುತ್ತಾಡಲು ಸಾಕಷ್ಟು ಸ್ಥಳಗಳಿವೆ. ಅಲ್ಲಿನ ಪರ್ವತಗಳು, ಹಿಮ, ಪ್ರಾಚೀನ ಮಠಗಳು, ಕಣಿವೆಗಳು ಕಣ್ಣಿಗೆ ತಂಪು ನೀಡುತ್ತವೆ.
ಯಮ್ತಂಗ್ ವ್ಯಾಲಿ : ಯಮ್ತಂಗ್ ವ್ಯಾಲಿ ಸಿಕ್ಕಿಂನಲ್ಲಿದೆ. ಇದನ್ನು ಫ್ಲವರ್ ಕಣಿವೆ ಎಂದೇ ಕರೆಯಲಾಗುತ್ತದೆ. ವಸಂತ ಕಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಹರಿದು ಬರ್ತಾರೆ.
ಹೊಗೇನಕಲ್ ಜಲಪಾತ : ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿ ಹೊಗೇನಕಲ್ ಜಲಪಾತವಿದೆ. ಇದನ್ನು ಭಾರತದ ನಯಾಗಾರ ಎಂದೇ ಕರೆಯಲಾಗುತ್ತದೆ. ಧುಮ್ಮಿಕ್ಕುವ ಕಾವೇರಿ ಇಲ್ಲಿ ಹೊಗೆ ಹೊಗೆಯಾಗಿ ಹರಿಯುವ ದೃಶ್ಯ ನಯನ ಮನೋಹರ.
ಚಂಪೈ : ಮಿಜೋರಾಂನಲ್ಲಿದೆ ಈ ಚಂಪೈ. ನಿಸರ್ಗ ಪ್ರಿಯರಿಗೆ ಇದು ಉತ್ತಮ ಸ್ಥಳ. ಇಲ್ಲಿನ ಹಸಿರು, ಪ್ರವಾಸಿಗರನ್ನು ಆಕರ್ಷಿಸುತ್ತದೆ.