ಬೆಂಗಳೂರು: ಹಿಜಾಬ್, ಕೇಸರಿ ಶಾಲು ವಿವಾದದ ಬೆನ್ನಲ್ಲೇ ಸಮವಸ್ತ್ರ ಕುರಿತು ಆದೇಶ ಹೊರಡಿಸಲಾಗಿದೆ. ಆಯಾ ಶಾಲೆಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯವಾಗಿರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ನಿಗದಿಪಡಿಸಲಾದ ಸಮವಸ್ತ್ರ ಕಡ್ಡಾಯವಾಗಿದ್ದು, ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಗಳು ನಿರ್ಧರಿಸಿದ ಸಮವಸ್ತ್ರ ಕಡ್ಡಾಯವಾಗಿರುತ್ತದೆ. ಹಿಜಾಬ್, ಕೇಸರಿ ಶಾಲು ಜಟಾಪಟಿಗೆ ಬ್ರೇಕ್ ಹಾಕಲು ಪ್ರಯತ್ನ ನಡೆಸಲಾಗಿದ್ದು, ಏಕರೂಪದ ಸಮವಸ್ತ್ರವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಕಾಲೇಜಿನಲ್ಲಿ ಸಮವಸ್ತ್ರ ಖಚಿತವಾಗಿದ್ದು, ಕಾಲೇಜುಗಳಲ್ಲಿ ಅಲ್ಲಿ ನಿಗದಿಪಡಿಸಿದ ಸಮವಸ್ತ್ರ ಫೈನಲ್ ಆಗಿರುತ್ತದೆ. ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸುವ ಸಮವಸ್ತ್ರ ಫೈನಲ್ ಆಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿರ್ಧಾರ ಮಾಡಿದ ಸಮವಸ್ತ್ರ ಸಮವಸ್ತ್ರ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಹಿಜಾಬ್ ವಿವಾದದ ಬೆನ್ನಲ್ಲೇ ಸಮವಸ್ತ್ರ ಕುರಿತಾಗಿ ಆದೇಶ ಹೊರಡಿಸಲಾಗಿದ್ದು, ಆಯಾ ಶಾಲೆಗಳ ಆಡಳಿತ ಮಂಡಳಿ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯವಾಗಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಧಾರ ಕೈಗೊಳ್ಳಲಿದ್ದು, ಆಡಳಿತ ಮಂಡಳಿಗಳು ನಿರ್ಧರಿಸಿದ ಸಮವಸ್ತ್ರವೇ ಕಡ್ಡಾಯವಾಗಿರುತ್ತದೆ ಎನ್ನಲಾಗಿದೆ.
ಈ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲು ಜಟಾಪಟಿಗೆ ಬ್ರೇಕ್ ಹಾಕಲು ಸರ್ಕಾರ ಕ್ರಮ ಕೈಗೊಂಡಿದ್ದು, ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ. ಶಾಲೆ-ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ಫಿಕ್ಸ್ ಆಗಿದೆ. ಪಿಯುಸಿ ಕಾಲೇಜುಗಳಲ್ಲಿ ಅಲ್ಲಿ ನಿಗದಿಪಡಿಸಿದ ಸಮವಸ್ತ್ರವೇ ಫೈನಲ್ ಆಗಿರುತ್ತದೆ. ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿದ ಸಮವಸ್ತ್ರ, ಆಡಳಿತ ಮಂಡಳಿ ಸಮಿತಿ ನಿರ್ಧರಿಸಿದ ಸಮವಸ್ತ್ರ ಧರಿಸಬೇಕಿದೆ. ಸಮವಸ್ತ್ರ ನಿಗದಿ ಮಾಡದಿದ್ದಲ್ಲಿ ಸಮರ್ಪಕ ಉಡುಪು ಧರಿಸಿ ಬರಬೇಕಿದೆ ಎನ್ನಲಾಗಿದೆ.