ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿವಾದಿತ ಹೇಳಿಕೆ ನೀಡಿದ್ದಾರೆ. ಹಿಜಾಬ್, ಬುರ್ಖಾ ಧರಿಸುವುದರ ಬಗ್ಗೆ ಹೇಳಿಕೆ ನೀಡಿದ ಅವರು, ಹಿಜಾಬ್, ಬುರ್ಖಾ ಧರಿಸದಿರುವುದೇ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳ ಸೌಂದರ್ಯ ಮುಚ್ಚಿಡಲು ಬುರ್ಖಾ ಧರಿಸುತ್ತಾರೆ. ಹಿಜಾಬ್ ಅಂದರೆ ಪರದೆ ಎಂದು ಅರ್ಥ. ಹೆಣ್ಣುಮಕ್ಕಳ ಸೌಂದರ್ಯವನ್ನು ಪರಪುರುಷರು ನೋಡಬಾರದು ಎನ್ನುವ ಕಾರಣಕ್ಕೆ ಬುರ್ಖಾ ಬಳಸಲಾಗುತ್ತದೆ. ಹಿಂದಿನಿಂದಲೂ ನಡೆದುಕೊಂಡು ಪದ್ಧತಿ ಇದಾಗಿದೆ. ಹೊಸದಾಗಿ ಬುರ್ಖಾ, ಹಿಜಾಬ್ ಧರಿಸುತ್ತಿಲ್ಲ ಎಂದು ಹೇಳಿದ್ದಾರೆ
ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಇದಕ್ಕೆ ಬುರ್ಖಾ ಹಾಕದಿರುವುದೇ ಕಾರಣ. ಹಿಜಾಬ್ ಕಡ್ಡಾಯವಲ್ಲ, ಇಷ್ಟವಿಲ್ಲದವರು ಧರಿಸದಿದ್ದರೂ ನಡೆಯುತ್ತದೆ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳು ದೊಡ್ಡವರಾದ ನಂತರ ಅವರ ಸೌಂದರ್ಯವನ್ನು ಮರೆಮಾಡಲು ‘ಪರ್ದಾ'(ಮುಸುಕು) ಹಿಂದೆ ಇಡುವುದು ಹಿಜಾಬ್ ಪರಿಕಲ್ಪನೆಯಾಗಿದೆ. ಅವರ ಸೌಂದರ್ಯವು ಪರ ಪುರುಷರಿಗೆ ಗೋಚರಿಸಬಾರದು. ನನ್ನ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳನ್ನು ಹೊಂದಿದೆ. ಮಹಿಳೆಯರು ‘ಪರ್ದಾ’ ಧರಿಸದಿರುವುದು ಇದಕ್ಕೆ ಕಾರಣ ಎನ್ನುವುದು ಜಮೀರ್ ಅಭಿಪ್ರಾಯವಾಗಿದೆ.