ಬೆಂಗಳೂರು : ಹಿಜಾಬ್ ನಿಷೇಧ ವಾಪಾಸ್ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಡೆಗೆ ಬಿಜೆಪಿ( BJP) ಕೆಂಡಾಮಂಡಲವಾಗಿದೆ.
ಇನ್ನೂ, ಹಿಜಾಬ್ ವಾಪಸ್ಸು ಪಡೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಎಂದು ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್ ‘ಅಂದು ನಾನು ಕಾಲೇಜು ಬಿಟ್ಟಿದ್ದು, ಈಗ ಮತ್ತೆ ಕಾಲೇಜಿಗೆ ಹೋಗುವೆ, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಅವರಿಗೆ ಧನ್ಯವಾದ ಅಂತ ಹೇಳಿದರು. ಇನ್ನೂ ಹಾಗೇ ಸಾಕಷ್ಟು ಮಂದಿ ಶಾಲಾ ಕಾಲೇಜನ್ನು ಬಿಟ್ಟಿದ್ದಾರೆ, ನಾನು ಅವರಿಗೆ ವಿಧ್ಯಾಭ್ಯಾಾಸ ಮುಂದುವರೆಸಲು ಕರೆ ನೀಡುವೆ ಎಂದು ಮುಸ್ಕಾನ್ ಹೇಳಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ಗೆ ಮತ್ತೆ ಅನುಮತಿ ನೀಡೋದಾಗಿ ಹೇಳಿದ್ದಾರೆ. ಇದೀಗ ಈ ಹೇಳಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಕಿಡಿಕಾರಿದೆ.