
ಅಧಿಕಾರವನ್ನು ಮರಳಿ ಪಡೆಯಲಿಕ್ಕೋಸ್ಕರ ತಂತ್ರಗಳನ್ನು ಹೂಡುತ್ತಿರುವ ರಾಜಕಾರಣಿಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಜನರ ವಿಶ್ವಾಸವನ್ನು ಮರಳಿ ಪಡೆಯಲು ಯಾರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೋ ಅಂತಹ ರಾಜಕಾರಣಿಗಳಿಗೆ ಮಾತ್ರ ವಿಧಾನಸಭೆಯಲ್ಲಿ ಸಮಯ ಮೀಸಲಿಡುವಂತೆ ಶಾಸನ ಸಭೆಯ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿದ್ದಾರೆ.
ಶಾಸನಸಭೆಗಳ ಅಧ್ಯಕ್ಷರ 82ನೇ ಸಮ್ಮೇಳನವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಈಗಿನ ದಿನಗಳಲ್ಲಿ ರಾಜಕಾರಣಿಗಳು ಅಧಿಕಾರವನ್ನು ವಾಪಸ್ ಪಡೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿದ್ರು.
ಆದರೆ ರಾಜಕೀಯದ ಮೇಲೆ ಜನರ ನಂಬಿಕೆಯನ್ನು ಉಳಿಸುವಂತೆ ಮಾಡಬಲ್ಲ ಸಮಾಜ ಸೇವೆಯಲ್ಲಿ ತೊಡಗಿರುವ ರಾಜಕಾರಣಿಗಳು ನಮ್ಮೊಂದಿಗೆ ಇದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದ್ರು.
ಈ ರೀತಿಯ ಪ್ರಾಮಾಣಿಕ ಜನಪ್ರತಿನಿಧಿಯ ಬಗ್ಗೆ ವರ್ಷದಲ್ಲಿ ಮೂರ್ನಾಲ್ಕು ಬಾರಿ ಸಭೆಗಳಲ್ಲಿ ಚರ್ಚಿಸುವಂತಾಗಬೇಕು. ಅವರ ಅನುಭವ ಹಾಗೂ ಸೇವೆಯ ಬಗ್ಗೆ ಮಾತನಾಡುವಾಗ ಇತರೆ ರಾಜಕಾರಣಿಗಳಿಗೆ ಸ್ಪೂರ್ತಿ ನೀಡುವುದು ಮಾತ್ರವಲ್ಲದೇ ರಾಜಕಾರಣದ ಮೇಲೆ ಸಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಎಲ್ಲಾ ರಾಜಕಾರಣಿಗಳು ಸಮಾಜ ಸೇವೆಗೆ ತಮ್ಮ ಸಮಯವನ್ನು ಮೀಸಲಿಡಬೇಕು. ಏಕೆಂದರೆ ಇದರಿಂದ ಇತರೆ ರಾಜಕಾರಣಿಗಳಿಗೆ ಸ್ಪೂರ್ತಿ ಸಿಕ್ಕಂತೆ ಆಗುತ್ತದೆ. ಇವರ ಕೊಡುಗೆಗಳು ದೇಶದ ಜನತೆಗೂ ರಾಜಕಾರಣದ ಮೇಲೆ ನಂಬಿಕೆ ಹುಟ್ಟಿಸುತ್ತದೆ ಎಂದು ಹೇಳಿದರು.