ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲವೂ ಬದಲಾಗುತ್ತಿರುವ ವೇಳೆ ಮಧ್ಯಮ ವರ್ಗದವರ ಮನೆ ಖರೀದಿ ಆಸೆಗಳಲ್ಲೂ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ.
ಆಸ್ಪತ್ರೆಗಳು ಹಾಗೂ ಉದ್ಯಾನವನಗಳ ಬಳಿ ಮನೆ ಖರೀದಿ ಮಾಡಬೇಕೆಂದು ಕೋಲ್ಕತ್ತಾದ ಮಧ್ಯಮ ಆದಾಯದ ಐದು ಕುಟುಂಬಗಳಲ್ಲಿ ಎರಡು ಕುಟುಂಬಗಳು ಬಯಸುತ್ತಿದ್ದು, ಇದಕ್ಕಾಗಿ 9% ಹೆಚ್ಚುವರಿ ಖರ್ಚು ಮಾಡಲೂ ಸಹ ಈ ಕುಟುಂಬಗಳು ಸಿದ್ಧವಿರುವುದಾಗಿ ಸರ್ವೇ ವರದಿಯೊಂದು ತಿಳಿಸುತ್ತಿದೆ.
ಅಂತಾರಾಷ್ಟ್ರೀಯ ಆಸ್ತಿ ಕನ್ಸಲ್ಟಂಟ್ ನೈಟ್ ಫ್ರಾಂಕ್ ಈ ಸಮೀಕ್ಷೆ ನಡೆಸಿದ್ದು, ಕೋವಿಡ್ ಕಾರಣದಿಂದ ಮನೆ ಖರೀದಿದಾರರಲ್ಲಿ ಯಾವ ಥರದ ಬದಲಾವಣೆಗಳಾಗಿವೆ ಎಂದು ಅರಿಯಲು ಮುಂದಾಗಿದ್ದರು.
ವಾಸ್ತು ಶಾಸ್ತ್ರ ಪಾಲಿಸುವವರು ಮನೆಯಲ್ಲಿಡಬೇಡಿ ಈ ವಸ್ತು
ಕೋವಿಡ್ ಲಾಕ್‌ಡೌನ್ ಪ್ರಭಾವದಿಂದಾಗಿ ಮುಂಚೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜಾಗ ಇರುವ ಮನೆಗಳ ಖರೀದಿಗೆ ಜನರು ಇಚ್ಛಿಸುತ್ತಿರುವುದಾಗಿ, ಸಮೀಕ್ಷೆಯಲ್ಲಿ ತಿಳಿಸಿರುವ 18%ನಷ್ಟು ಪ್ರತಿಕ್ರಿಯಾದಾರರು, ಮುಂದಿನ 12 ತಿಂಗಳ ಒಳಗೆ ತಮ್ಮ ಮನೆಗಳನ್ನು ಬೇರೆಡೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ.
ತಾವು ಮನೆಗಳಿಂದ ಕೆಲಸ ಮಾಡುತ್ತಾ, ತಮ್ಮ ಮಕ್ಕಳು ಆನ್ಲೈನ್ ಕ್ಲಾಸ್‌ನಲ್ಲಿ ಹಾಜರಾಗುತ್ತಾ ಇರುವಂಥ ವ್ಯವಸ್ಥೆ ರೂಪಿಸಿಕೊಳ್ಳಬಹುದಾದ ಮನೆಗಳನ್ನು ಉಪನಗರ ಪ್ರದೇಶಗಳಲ್ಲಿ ನೋಡುತ್ತಿರುವುದಾಗಿ ಮೂರರಲ್ಲಿ ಒಬ್ಬರು ತಿಳಿಸಿದ್ದಾರೆ.