alex Certify ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮಹಿಳೆ ವಿಚಿತ್ರ ವರ್ತನೆ: ವಿಡಿಯೋ ವೈರಲ್‌ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮಹಿಳೆ ವಿಚಿತ್ರ ವರ್ತನೆ: ವಿಡಿಯೋ ವೈರಲ್‌ | Watch Video

ಲಕ್ನೋ ನಗರದ ವಿಭೂತಿ ಖಂಡ ಪ್ರದೇಶದಲ್ಲಿರುವ ಲೋಹಿಯಾ ಆಸ್ಪತ್ರೆಯ ಹೊರಗಡೆ ಬುಧವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಅಚ್ಚರಿಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಸುಮಾರು 20 ನಿಮಿಷಗಳ ಕಾಲ ತಲೆಯನ್ನು ತಿರುಗಿಸುತ್ತಾ, ಕೈಗಳನ್ನು ಅಲ್ಲಾಡಿಸುತ್ತಾ, ಕೆಲವೊಮ್ಮೆ ಕೈ ಮುಗಿಯುತ್ತಾ ಅಸಹಜವಾಗಿ ವರ್ತಿಸಿದ್ದಾರೆ.

ಈ ದೃಶ್ಯವನ್ನು ಕಂಡ ಜನರು ಆಶ್ಚರ್ಯಚಕಿತರಾದರು. ಸ್ಥಳದಲ್ಲಿ ಜಮಾಯಿಸಿದ ಜನರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಮಹಿಳೆಯ ಪಕ್ಕದಲ್ಲಿ ಕಪ್ಪು ಬಣ್ಣದ ಬ್ಯಾಗ್ ಕೂಡ ಇತ್ತು. ರಸ್ತೆಯ ಬದಿಯಿಂದ ವಾಹನಗಳು ಹಾದುಹೋಗುತ್ತಿದ್ದರೂ, ಮಹಿಳೆ ಮಾತ್ರ ತನ್ನ ವರ್ತನೆಯನ್ನು ನಿಲ್ಲಿಸಲಿಲ್ಲ.

ನಂತರ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ, ಮಹಿಳೆ ಮಾತ್ರ ತನ್ನ ವರ್ತನೆಯನ್ನು ಮುಂದುವರೆಸಿದಳು. ಇದರಿಂದಾಗಿ ಆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಅಂತಿಮವಾಗಿ ಪೊಲೀಸರು ಮಹಿಳೆಯನ್ನು ಪಕ್ಕಕ್ಕೆ ಕರೆದೊಯ್ದರು.

ಮಹಿಳೆ ಈ ರೀತಿ ವರ್ತಿಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮಹಿಳೆಯ ಗುರುತು ಕೂಡ ಪತ್ತೆಯಾಗಿಲ್ಲ. ಮಹಿಳೆಯ ಕುಟುಂಬದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...