ಬಹುತೇಕ ಎಲ್ಲ ಗ್ರಾಹಕರೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುತ್ತಾರೆ. ಆದ್ರೆ ಇನ್ನೂ ಅನೇಕರು ಈ ಸೌಲಭ್ಯ ಪಡೆದಿಲ್ಲ. ಅಂತವರು ಚೆಕ್ ಮೂಲಕ ವ್ಯವಹಾರ ನಡೆಸುತ್ತಾರೆ. ಚೆಕ್ ಮೂಲಕ 50,000 ರೂಪಾಯಿಗಿಂತ ಹೆಚ್ಚನ ಹಣವನ್ನು ವಿತ್ ಡ್ರಾ ಮಾಡಲು ಬಯಸಿದ್ದರೆ ಇನ್ಮುಂದೆ ಕೆಲಸ ಕಠಿಣವಾಗಲಿದೆ. ಬ್ಯಾಂಕುಗಳು ಈಗ ಪಾಸಿಟಿವ್ ಪೇ ಸಿಸ್ಟಮ್ ಜಾರಿಗೆ ತರಲು ಆರಂಭಿಸಿವೆ. ಹೆಚ್ಚಿನ ಬ್ಯಾಂಕುಗಳು ಸೆಪ್ಟೆಂಬರ್ 1 ರಿಂದ ಧನಾತ್ಮಕ ವೇತನ ವ್ಯವಸ್ಥೆಯನ್ನು ಜಾರಿಗೊಳಿಸಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 2020 ರಲ್ಲಿ ಚೆಕ್ ಟ್ರಾನ್ಸಾಕ್ಷನ್ ಸಿಸ್ಟಮ್ ಗೆ ಧನಾತ್ಮಕ ವೇತನ ವ್ಯವಸ್ಥೆಯನ್ನು ಘೋಷಿಸಿತ್ತು. ಈ ನಿಯಮದ ಪ್ರಕಾರ, ಬ್ಯಾಂಕುಗಳು ಈ ಸೌಲಭ್ಯವನ್ನು ಎಲ್ಲಾ ಖಾತೆದಾರರಿಗೆ ತಮ್ಮ ಇಚ್ಛೆಯಂತೆ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಗಳಿಗೆ ಅನ್ವಯಿಸಬಹುದಾಗಿದೆ.
ನಿಯಮದ ಪ್ರಕಾರ, ಚೆಕ್ ನೀಡುವ ಮೊದಲು ಬ್ಯಾಂಕ್ ಗೆ ಸೂಚನೆ ನೀಡಬೇಕಾಗುತ್ತದೆ. ಇಲ್ಲವಾದ್ರೆ ಬ್ಯಾಂಕ್, ಚೆಕ್ ತಿರಸ್ಕರಿಸುತ್ತದೆ. ಈ ನಿಯಮವು ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸದ ಹಿರಿಯ ನಾಗರಿಕರಿಗೆ ಸಮಸ್ಯೆಯುಂಟು ಮಾಡುವ ಸಾಧ್ಯತೆಯಿದೆ.
ಆಕ್ಸಿಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳು 50 ಸಾವಿರಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ ಪಿಪಿಎಸ್ ಕಡ್ಡಾಯಗೊಳಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಸಹ 50,000 ರೂಪಾಯಿಗಿಂತ ಹೆಚ್ಚಿನ ಚೆಕ್‌ಗಳಿಗೆ ಧನಾತ್ಮಕ ವೇತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.