ಬೆಂಗಳೂರು: ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಂಡು ಬರುತ್ತಿದೆ.
ಕೊರೋನಾ ಎರಡನೇ ಅಲೆಯಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಆತಂಕ ಮೂಡಿಸಿದೆ. ಸ್ಟಿರಾಯ್ಡ್ ಬಳಕೆಯಿಂದ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ನಡುವೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಮತ್ತು ಮನೆಗಳಲ್ಲಿ ಹೋಂ ಐಸೋಲೇಷನ್ ನಲ್ಲಿ ಇದ್ದವರಲ್ಲಿ ಹೈಪರ್ ಗ್ಲೈಸಿಮಿಯಾ(ಸಕ್ಕರೆ ಅಂಶ) ಕಾಣಿಸಿಕೊಂಡಿದೆ. ಇದಕ್ಕೆ ಕೊರೋನಾ ಸೋಂಕು ಮುಖ್ಯವಾದ ಕಾರಣವಾಗಿದ್ದು, ಸಕ್ಕರೆ ಕಾಯಿಲೆ ಇಲ್ಲದವರು ಕೂಡ ಮಧುಮೇಹಿಗಳಾಗಿದ್ದಾರೆ.
ಕೆಲವರಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗಿದ್ದರೆ ಮತ್ತೆ ಕೆಲವರಲ್ಲಿ ಇದು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಜೀವರಕ್ಷಕವಾಗಿರುವ ಸ್ಟಿರಾಯ್ಡ್ ಬಳಕೆಯಿಂದ ಸೋಂಕಿತರಲ್ಲಿ ಅನೇಕ ಸವಾಲು ಎದುರಾಗಿದೆ. ಮಾನಸಿಕ ಒತ್ತಡ, ಸಾವಿನ ಭೀತಿ ಸೇರಿದಂತೆ ಹಲವು ಕಾರಣದಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚು ಕಡಿಮೆಯಾಗುತ್ತದೆ ಎಂದು ಡಯಾಬಿಟಿಸ್ ಇಂಡಿಯಾ ತಿಳಿಸಿದೆ.
ಇನ್ನು ಕೊರೋನಾ ಸೋಂಕಿನಿಂದ ಗುಣಮುಖರಾದ ಕೆಲವರಲ್ಲಿ ಗ್ಯಾಂಗ್ರಿನ್, ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ. ಕೊರೊನಾದಿಂದ ಗುಣಮುಖರಾದರಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗಿದೆ.