ನವದೆಹಲಿ: ಭೂಮಿಯತ್ತ ಶಕ್ತಿಶಾಲಿ ಸೌರ ಮಾರುತ ಧಾವಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೋಮವಾರ ಯಾವುದೇ ಕ್ಷಣದಲ್ಲಿ, ಈ ಶಕ್ತಿಶಾಲಿ ಸೌರ ಮಾರುತ ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಲಿದೆ.
ಇದರಿಂದಾಗಿ ಮೊಬೈಲ್ ನೆಟ್ವರ್ಕ್ ಮತ್ತು ಜಿಪಿಎಸ್ ವ್ಯವಸ್ಥೆ ಕೆಲವು ಸಮಯ ಅಸ್ತವ್ಯಸ್ತವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸೂರ್ಯನಿಂದ ಹೊರಹೊಮ್ಮುವ ಶಕ್ತಿಶಾಲಿ ಕಣಗಳು ಮತ್ತು ಪ್ಲಾಸ್ಮಾ ಕಣಗಳನ್ನು ಸೌರಮಾರುತಗಳ ಎಂದು ಹೇಳಲಾಗುತ್ತದೆ. ಅತಿವೇಗವಾಗಿ ಚಲಿಸುವುದರಿಂದ ಇವನ್ನು ಸೌರ ಚಂಡಮಾರುತ ಎಂದು ಕರೆಯಲಾಗುತ್ತದೆ.
ಇಂತಹ ಮಾರುತಗಳು ಗಂಟೆಗೆ 10 ಲಕ್ಷ ಮೈಲು ವೇಗದಲ್ಲಿರುತ್ತವೆ. ಭೂಮಿಯತ್ತ ಧಾವಿಸುತ್ತಿರುವ ಸೌರ ಮಾರುತ ಪ್ರತಿ ಸೆಕೆಂಡಿಗೆ 500 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದೆ. ಭೂಮಿಯ ಕಕ್ಷೆಯನ್ನು ಇದು ಪ್ರವೇಶಿಸಿದ ಸಂದರ್ಭದಲ್ಲಿ ಬೆಳಕಿನ ಚಿತ್ತಾರ ಮೂಡಲಿದ್ದು, ಇದನ್ನು ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿ ವಾಸಿಸುತ್ತಿರುವವರು ಕಂಡುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.