ಬೆಂಗಳೂರು: ಸರಣಿ ಅತ್ಯಾಚಾರ, ಕೊಲೆ ಆರೋಪಿ ಉಮೇಶ್ ರೆಡ್ಡಿ ಪೆರೋಲ್ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು, ಮನೆ ದುರಸ್ತಿಗೊಳಿಸಲು 30ದಿನ ಪೆರೋಲ್ ನೀಡಬೇಕೆಂದು ಉಮೇಶ್ ರೆಡ್ಡಿ ಮನವಿ ಮಾಡಿದ್ದ. ಎರಡು ಕಾರಣಗಳಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪೆರೋಲ್ ನೀಡಿದರೆ ಉಮೇಶ್ ರೆಡ್ಡಿ ಪ್ರಾಣಕ್ಕೆ ಅಪಾಯವೆಂದು ವರದಿ ಇದೆ. ಅಪರಾಧಿಗೆ ಇಬ್ಬರು ಸಹೋದರರಿದ್ದು, ತಾಯಿಯನ್ನು ನೋಡಿಕೊಳ್ಳುತ್ತಾರೆ. 30 ವರ್ಷ ಸೆರೆವಾಸದ ಬಳಿಕ ಪೆರೋಲ್ ಸೇರಿ ಕ್ಷಮಾದಾನ ಕೋರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. 30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.