
ಧಾರವಾಡ: ಹದಿಹರೆಯದವರ ಮೇಲೆ ಪೋಕ್ಸೋ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 9 ನೇ ತರಗತಿಯಿಂದಲೇ ಪೋಕ್ಸೋ ಕಾಯ್ದೆಯ ಬಗ್ಗೆ ಶಿಕ್ಷಣ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠದಿಂದ ನಿರ್ದೇಶನ ನೀಡಲಾಗಿದೆ.
ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಹೈಕೋರ್ ಪೀಠ ಸೂಚನೆ ನೀಡಿದೆ. ಪೋಕ್ಸೋ ಕಾಯ್ದೆ ಪರಿಣಾಮದ ಬಗ್ಗೆ ತಿಳಿಸಬೇಕು. 16 ವರ್ಷ ತುಂಬಿದವರು ಪ್ರೀತಿಸಿ ಸಂಬಂಧ ಹೊಂದುವುದು ಹೆಚ್ಚಾಗುತ್ತಿದೆ. 16 – 18 ವರ್ಷದೊಳಗಿನವರ ಸಮ್ಮತಿಯನ್ನು ಕಾನೂನು ಪರಿಗಣಿಸುವುದಿಲ್ಲ. ಪ್ರೀತಿಸಿ ಮದುವೆಯಾದರೂ ಪ್ರಕರಣ ದಾಖಲಾಗುವ ಘಟನೆಗಳು ಇವೆ. ಕಾನೂನು ಆಯೋಗ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ, ಜಿ. ಬಸವರಾಜ್ ಅವರಿದ್ದ ಪೀಠ ಆದೇಶ ನೀಡಿದೆ.