alex Certify ‘ಮಾರ್ಟಿನ್’ ಚಿತ್ರದ ಪೋಸ್ಟರ್ ನಲ್ಲಿ ನಿರ್ದೇಶಕನ ಹೆಸರು ಕೈಬಿಡದಂತೆ ಹೈಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾರ್ಟಿನ್’ ಚಿತ್ರದ ಪೋಸ್ಟರ್ ನಲ್ಲಿ ನಿರ್ದೇಶಕನ ಹೆಸರು ಕೈಬಿಡದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರದ ಪೋಸ್ಟರ್ ಮತ್ತಿತರ ಪ್ರಚಾರ ಚಟುವಟಿಕೆಗಳಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಫಿಲಮ್ಸ್ ಎಂಬ ಅಡಿ ಬರಹ ಬಳಸಬೇಕು. ನಿರ್ದೇಶಕರನ್ನು ಪ್ರಚಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಮಾರ್ಟಿನ್’ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರ ಪ್ರಚಾರದಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಹೆಸರನ್ನು ಕೈಬಿಡದಂತೆ ಹೈಕೋರ್ಟ್ ರಜಾ ಕಾಲದ ನ್ಯಾಯಪೀಠ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ. ಎ.ಪಿ. ಅರ್ಜುನ್ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ನ್ಯಾಯಾಲಯ, ನಿರ್ದೇಶಕರ ಹೆಸರನ್ನೇ ಕೈ ಬಿಟ್ಟು ಸಿನಿಮಾ ಪ್ರಚಾರ ಮಾಡಬಾರದು ಎಂದು ಆದೇಶ ನೀಡಿ ಪ್ರತಿವಾದಿಗಳಾದ ನಿರ್ಮಾಪಕ ಉದಯ್ ಮೆಹ್ತಾ, ವಾಸವಿ ಎಂಟರ್ಪ್ರೈಸಸ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...