ಬೆಂಗಳೂರು: ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ ದಂಡ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ಮೃತ ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. ಅಪರಾಧಿಗೆ ವಿದ್ಯುತ್ ಕಾಯ್ದೆಯಡಿ 29,204 ರೂ.ದಂಡ ವಿಧಿಸಲಾಗಿತ್ತು. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ವೇಳೆ ಅಪರಾಧಿ ಸಾವು ಕಂಡಿದ್ದಾರೆ. ಅಪರಾಧಿ ಸಾವಿನ ಬಗ್ಗೆ ಹೈಕೋರ್ಟ್ ಗೆ ವಕೀಲರು ಮಾಹಿತಿ ನೀಡಿದ್ದಾರೆ.
ವಿಚಾರಣೆ ನಡೆದು ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಮೃತನ ಆಸ್ತಿಯ ಉತ್ತರಾಧಿಕಾರಿಯಿಂದಲೂ ದಂಡ ವಸೂಲಿ ಮಾಡಬಹುದು ಎಂದು ಹೇಳಿದೆ. ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.