
ಬೆಂಗಳೂರು: ಹೈಕೋರ್ಟ್ ಆದೇಶವನ್ನು ನಕಲು ಮಾಡಿ ಲಕ್ಷಾಂತರ ರೂಪಾಯಿ ಹಣ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ಮೂಲದ ವಿಜೇತ್ ಹಾಗೂ ಲೋಹಿತ್ ಬಂಧಿತ ಆರೋಪಿಗಳು. ವಿಧಾನಸೌಧ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಹೈಕೋರ್ಟ್ ನೀಡಿದ ಆದೇಶ ಪ್ರತಿಯನ್ನೇ ಹೋಲುವಂತಹ ನಕಲಿ ಆದೇಶ ಪ್ರತಿ ಸಿದ್ದಪಡಿಸಿ ಅದನ್ನು ಬಳಸಿಕೊಂಡು ವಂಹಿಸುತ್ತಿದ್ದರು. ಇದೇ ರೀತಿ ಓರ್ವ ಆರೋಪಿ ತನ್ನ ಗರ್ಲ್ ಫ್ರೆಂಡ್ ನ್ನೇ ವಂಚಿಸಿದ್ದಾನೆ.
ಇನ್ನೊಬ್ಬ ಆರೋಪಿ ವಿಜೇತ್ ಜಾರಿ ನಿರ್ದೇಶನಾಲಯ-ಇಡಿ ಹಣ ಮುಟ್ಟುಗೋಲು ಹಾಕಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದ್ದು ಎಂದು ನಂಬಿಕೆ ಬರುವ ರೀತಿಯಲ್ಲಿ ಹೈಕೋರ್ಟ್ ಆದೇಶವನ್ನು ಹೋಲುವಂತಹ ನಕಲಿ ಆದೇಶ ಪ್ರತಿ ಸೃಷ್ಟಿಸಿದ್ದ. ಒಂದು ಕೋಟಿಗೂ ಹೆಚ್ಚು ಹಣವನ್ನು ಇಡಿ ಸೀಜ್ ಮಾಡಿದೆ. ಆದರೆ ಹೈಕೋರ್ಟ್ ತಮ್ಮ ಪರ ತೀರ್ಪು ನೀಡಿದೆ. ಸೀಜ್ ಮಾಡಿದ ಹಣವನ್ನು ತಮಗೆ ಕೊಡಬೇಕು ಎಂದು ಸೂಚಿಸಿದೆ. ಹಾಗಾಗಿ ಆ ಹಣ ಬಿಡಿಸಿಕೊಳ್ಳಲು ನಮಗೆ ಸ್ವಲ್ಪ ಹಣ ಬೇಕು. ನಮ್ಮ ಹಣ ಕೈಸೇರಿದ ಬಳಿಕ ನಿಮ್ಮ ಹಣ ವಾಪಾಸ್ ಕೊಡುತ್ತೇವೆ ಎಂದು ಲಕ್ಷ ಲಕ್ಷ ಹಾ ಪಡೆದು ಎಸ್ಕೇಪ್ ಆಗುತ್ತಿದ್ದರು.
ಆರೋಪಿಗಳ ಮಾತು ನಂಬಿ ಮೂವರು ಹಣ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂದಿದ್ದರು. ಹಲವರಿಗೆ 70 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದರು. ಈ ಬಗ್ಗೆ ವಿಧಾನಸೌಇಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.