alex Certify BIG NEWS: ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ವಾಪಸ್ ಪಡೆದ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ವಾಪಸ್ ಪಡೆದ ಹೈಕೋರ್ಟ್

ಬೆಂಗಳೂರು: ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ದೃಶ್ಯ(ಚೈಲ್ಡ್ ಪೋರ್ನೊಗ್ರಫಿ) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ರ ಬಿ ಅನ್ವಯ ಅಪರಾಧವಲ್ಲವೆಂದು ಜುಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದುಕೊಂಡಿದೆ.

ನ್ಯಾಯಾಲಯವು ಐಟಿ ಕಾಯ್ದೆ ಸೆಕ್ಷನ್ 67 ಬಿ, (ಬಿ) ಪರಿಶೀಲಿಸದೆ ಈ ಆದೇಶ ನೀಡಿತ್ತು. ಹಾಗಾಗಿ ಹಿಂದಿನ ಆದೇಶ ವಾಪಸ್ ಪಡೆದು ಹೊಸ ಆದೇಶ ಹೊರಡಿಸಿದೆ. ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸಲು ಸೂಚನೆ ನೀಡಿದೆ. ನ್ಯಾಯಮೂರ್ತಿಗಳು ಕೂಡ ಮನುಷ್ಯರೇ, ಹಾಗಾಗಿ ಸಹಜವಾಗಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ತಪ್ಪು ಮಾಡದಿರುವುದು ಮಾನವೀಯತೆಗೆ ತಿಳಿದಿಲ್ಲ. ನ್ಯಾಯಮೂರ್ತಿಗಳು ದೋಷರಹಿತರಲ್ಲ. ದೋಷವು ನಾವು ನಿರ್ವಹಿಸುವ ಕಾರ್ಯಗಳಿಗೆ ಹೋಲುತ್ತದೆ. ಆದ್ದರಿಂದ ಈ ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದ ನಂತರ ಆ ತಪ್ಪನ್ನು ಮುಂದುವರೆಸುವುದು ನಾಯಕತ್ವವಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

2022ರ ಮಾರ್ಚ್ 23ರಂದು ಮಧ್ಯಾಹ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎನ್. ಇನಾಯತ್ ಉಲ್ಲಾ ವೆಬ್ಸೈಟ್ ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರು ಎಂದು ಘಟನೆ ನಡೆದ ಎರಡು ತಿಂಗಳ ನಂತರ ದೂರು ದಾಖಲಾಗಿತ್ತು. ಅದು ಐಟಿ ಕಾಯ್ದೆ 67ರ ಸೆಕ್ಷನ್ ಬಿ ಪ್ರಕಾರ ಅಪರಾಧವೆಂದು ಆರೋಪಿಸಲಾಗಿತ್ತು. ಅರ್ಜಿದಾರರು ಪ್ರಕರಣ ರದ್ದುಪಡಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅವರು ಸಲ್ಲಿಸಿದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಐಟಿ ಕಾಯ್ದೆ ಸೆಕ್ಷನ್ 67ರ ಬಿ ವ್ಯಾಪ್ತಿಗೆ ಒಳಪಡುವುದಿಲ್ಲ. ಅಪರಾಧವೂ ಆಗುವುದಿಲ್ಲ ಎಂದು ಆದೇಶಿಸಿತ್ತು. ಇನಾಯತ್ ಉಲ್ಲಾ ವಿರುದ್ಧದ ಪ್ರಕರಣ ರದ್ದು ಮಾಡಿತ್ತು.

ಸರ್ಕಾರದ ಪರ ವಕೀಲರು ಸಲ್ಲಿಸಿದ ಆದೇಶ ಮರುಪರಿಶೀಲನೆ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿದ ಹಿಂದಿನ ಆದೇಶ ಮಾರ್ಪಾಡು ಮಾಡಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಿದೆ. ನ್ಯಾಯಾಲಯಕ್ಕೆ ತನ್ನದೇ ಆದೇಶ ಮಾರ್ಪಾಡು ಮಾಡುವ ಅಧಿಕಾರವಿದೆ ಎಂದು ಪರಿಷ್ಕೃತ ಆದೇಶವನ್ನು ಹೊರಡಿಸಿ ನ್ಯಾಯಮೂರ್ತಿಗಳು ತಮ್ಮಿಂದ ತಪ್ಪಾಗಿದೆ ಅದನ್ನು ತಿದ್ದಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...