ಬೆಂಗಳೂರು: ಮದುವೆಯಾಗುವ ಭರವಸೆ ಉಲ್ಲಂಘನೆ ವಂಚನೆಯಲ್ಲ ಎಂದು ಕೇಸ್ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
ವೆಂಕಟೇಶ್ ಎಂಬಾತನ ವಿರುದ್ಧ ಯುವತಿ ನೀಡಿದ ದೂರನ್ನು ರದ್ದು ಮಾಡಲಾಗಿದೆ. ಯುವತಿಯನ್ನು ಪ್ರೀತಿಸಿ ನಂತರ ವೆಂಕಟೇಶ್ ಮದುವೆಯಾಗಿರಲಿಲ್ಲ. ಮನೆಯವರ ಒತ್ತಾಯದಂತೆ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದರು. ವೆಂಕಟೇಶ ಮತ್ತು ಕುಟುಂಬದವರ ವಿರುದ್ಧ ಯುವತಿ ದೂರು ನೀಡಿದ್ದರು. ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪ ಮಾಡಿದ್ದು, ಮದುವೆಯ ಭರವಸೆ ಉಲ್ಲಂಘನೆ ವಂಚನೆಯಾಗುವುದಿಲ್ಲವೆಂದು ಪ್ರಕರಣ ರದ್ದುಗೊಳಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಆದೇಶ ನೀಡಿದೆ.