ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಒಂದೇ ದಿನ 50 ಪ್ರಕರಣಗಳ ತೀರ್ಪು ಪ್ರಕಟಿಸಿ ದಾಖಲೆ ಬರೆದಿದೆ.
ಪ್ರಸ್ತುತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಒಂದೇ ದಿನ ಶಾಸಕ ಕೊತ್ತನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಅನೇಕ ಜನ ಪ್ರತಿನಿಧಿಗಳ ಒಟ್ಟು 50 ಪ್ರಕರಣಗಳ ತೀರ್ಪು ಪ್ರಕಟಿಸಿ ದಾಖಲೆ ಬರೆದಿದೆ.
ನಾಗಪ್ರಸನ್ನ ಅವರು ಗುರುವಾರ ಒಂದೇ ದಿನ ಈ ಮೊದಲೇ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ 50 ಪ್ರಕರಣಗಳಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಒಂದೇ ದಿನ 50 ಕ್ರಿಮಿನಲ್ ಪ್ರಕರಣಗಳ ತೀರ್ಪು ನೀಡುವ ಮೂಲಕ ಕರ್ನಾಟಕ ನ್ಯಾಯಾಂಗದಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ.
ಕಳೆದ ವರ್ಷ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಒಂದೇ ದಿನ 32 ತೀರ್ಪು ಪ್ರಕಟಿಸಿದ್ದರು. ಈ ವರ್ಷ ಜೂನ್ ತಿಂಗಳಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು 65 ತೀರ್ಪುಗಳನ್ನು ಒಂದೇ ದಿನ ಪ್ರಕಟಿಸಿದ್ದರು. ಕಳೆದ ವರ್ಷ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ಒಂದೇ ದಿನ 20 ತೀರ್ಪು ಪ್ರಕಟಿಸಿದ್ದರು.