
ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳು, ತಕರಾರು ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಮುಂದುವರೆಯಲಿದೆ.
ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಸ್ತೃತ ಪೀಠದಲ್ಲಿ ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಡೆಯಲಿದೆ. ಸಮವಸ್ತ್ರ ನೀತಿ ಜಾರಿ ಇರುವ ಶಾಲೆ-ಕಾಲೇಜುಗಳಲ್ಲಿ ತರಗತಿಗೆ ಹಾಜರಾಗುವಾಗ ಹಿಜಾಬ್, ಕೇಸರಿ ಶಾಲು ಧರಿಸುವಂತಿಲ್ಲ. ಧಾರ್ಮಿಕ ಬಾವುಟ ಬಳಸುವಂತಿಲ್ಲವೆಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಕುರಿತಂತೆ ಸಲ್ಲಿಕೆಯಾದ ತಕರಾರು ಅರ್ಜಿಗಳ ವಿಚಾರಣೆ ಸೋಮವಾರ ಮಧ್ಯಾಹ್ನ ಮುಂದುವರೆಯಲಿದೆ.