alex Certify ಮಹಿಳೆಯ ಹಳೆ ಕಾರು ಗುಜರಿಗೆ ಹಾಕುವುದಕ್ಕೆ ಹೈಕೋರ್ಟ್‌ ತಡೆ; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಹಳೆ ಕಾರು ಗುಜರಿಗೆ ಹಾಕುವುದಕ್ಕೆ ಹೈಕೋರ್ಟ್‌ ತಡೆ; ಇದರ ಹಿಂದಿದೆ ಈ ಕಾರಣ

ಭಾರತ ಸರ್ಕಾರವು ಫೆಬ್ರವರಿ 2021 ರಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಪರಿಚಯಿಸಿತು. ಇದನ್ನು ಏಪ್ರಿಲ್ 2022 ರಲ್ಲಿ ಜಾರಿಗೆ ತರಲಾಯಿತು. ಈ ಹೊಸ ನೀತಿಯು ಅಮೆರಿಕದ ಕ್ಯಾಶ್ ಫಾರ್ ಕ್ಲಂಕರ್ಸ್ ನಿಂದ ಪ್ರಭಾವಿತವಾಗಿದೆ. ಇದೀಗ ದೆಹಲಿ ಹೈಕೋರ್ಟ್ ಆಯಾ ಸಾರಿಗೆ ಇಲಾಖೆಗೆ ಹಳೆಯ ಕಾರುಗಳ ಸ್ಕ್ರಾಪಿಂಗ್ ಅನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಕಾರನ್ನು ಆಕೆಯ ಕುಟುಂಬದ ಕಾರು ಮತ್ತು ಕುಟುಂಬದ ಪರಂಪರೆಯ ಭಾಗವೆಂದು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಏನಿದು ಪ್ರಕರಣ ?

ನಿವೃತ್ತ ಸರ್ಕಾರಿ ಉದ್ಯೋಗಿ ಸುಷ್ಮಾ ಪ್ರಸಾದ್ ಅವರಿಗೆ ಸೇರಿರುವ ಕಾರನ್ನು ಪೂರ್ವ ಸೂಚನೆ ಇಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ವಶಪಡಿಸಿಕೊಂಡರು. ಮತ್ತು ಅದನ್ನು ಸ್ಕ್ರ್ಯಾಪೇಜ್‌ಗೆ ಕಳುಹಿಸಿದ್ದಾರೆ. ಇದು ಆಕೆಯ ಇಚ್ಛೆಗೆ ವಿರುದ್ಧವಾಗಿತ್ತು, ಏಕೆಂದರೆ ಅದು ಬಹಳಷ್ಟು ಭಾವನಾತ್ಮಕ ಮೌಲ್ಯವನ್ನು ಹೊಂದಿದೆ ಮತ್ತು ಅವಳ ಕುಟುಂಬ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಆ ಕಾರನ್ನು ಸ್ಕ್ರ್ಯಾಪ್ ಮಾಡಲು ಮಹಿಳೆ ಬಯಸಲಿಲ್ಲ. ತನ್ನ ಕಾರನ್ನು ರೆಟ್ರೋಫಿಟ್ ಕಿಟ್‌ಗಳೊಂದಿಗೆ ಇವಿ ಆಗಿ ಪರಿವರ್ತಿಸಲು ಯೋಜಿಸುತ್ತಿರುವುದಾಗಿ ಸುಷ್ಮಾ ತಿಳಿಸಿದ್ದರು.

ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಆಕೆ, ಕಾರು ಕುಟುಂಬದ ಮೌಲ್ಯಗಳು ಮತ್ತು ಪರಂಪರೆಯ ಮುಂದುವರಿಕೆಯನ್ನು ಸಂರಕ್ಷಿಸುವ ವ್ಯಕ್ತಿಯ ಹಕ್ಕನ್ನು ಒಳಗೊಂಡಿತ್ತು. ಅದಕ್ಕೂ ಮಿಗಿಲಾಗಿ ಕಾರು ತನ್ನ ತಾಯಿಯ ಉಡುಗೊರೆ ಎಂದೂ ಹೇಳಿದ್ದಾರೆ.

ಅರ್ಜಿಯನ್ನು ಆಲಿಸಿದ ನ್ಯಾ. ಮನೋಜ್ ಓಹ್ರಿ, ಸುಷ್ಮಾ ಅವರ ಹಳೆಯ ಕಾರನ್ನು ಸ್ಕ್ರಾಪ್ ಮಾಡದಂತೆ ಆದೇಶಿಸಿದ್ರು. ಮೇಲೆ ತಿಳಿಸಲಾದ ಉದ್ದೇಶಗಳಿಗಾಗಿ ಹೊರತು ಸಾರ್ವಜನಿಕ ಸ್ಥಳಗಳಲ್ಲಿ ಕಾರನ್ನು ಓಡಿಸುವುದಿಲ್ಲ ಅಥವಾ ನಿಲ್ಲಿಸುವುದಿಲ್ಲ ಎಂದು ಸುಷ್ಮಾ ಹೇಳಿದ್ದು, ಕೋರ್ಟ್ ನಲ್ಲಿ ಈ ಹೇಳಿಕೆಯನ್ನು ದಾಖಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...