
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಲಾಗಿದೆ.
ಕೋವಿಡ್ ಪರೀಕ್ಷೆ ವರದಿ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಎಸ್ಎಂಎಸ್, ವಾಟ್ಸಾಪ್ ಮೂಲಕ ಶೀಘ್ರ ವರದಿಗೆ ಸೂಚನೆ ನೀಡಲಾಗಿದೆ. 24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದ್ದು, ಟೆಸ್ಟ್ ಮಾಡಿಸಿದವರು ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ತಿಳಿಸಿದೆ.
ಬೆಡ್ ನಿರ್ವಹಣೆಗೆ ವ್ಯವಸ್ಥೆ ಇರುವುದಾಗಿ ಸರ್ಕಾರದಿಂದ ಹೇಳಿಕೆ ನೀಡಲಾಗಿದೆ. ಬೆಡ್ ಒದಗಿಸುವುದು ಸರ್ಕಾರದ ಕರ್ತವ್ಯ. ಅಗತ್ಯವಿಲ್ಲದಿದ್ದರೂ ಕೆಲವರು ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಮಾರ್ಗಸೂಚಿ ರೂಪಿಸಬೇಕು. ಆಸ್ಪತ್ರೆಗಳ ದರ ನಿಯಂತ್ರಣಕ್ಕೆ ಹೆಲ್ಪ್ ಲೈನ್ ಆರಂಭಿಸಬೇಕು. ಸರ್ಕಾರ ಹೆಲ್ಪ್ ಲೈನ್ ಬಗ್ಗೆ ಪ್ರಚಾರ ಕೊಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.