alex Certify ಸಹಕಾರ ಸಂಘಗಳ ಸದಸ್ಯರಿಗೆ ಬಿಗ್ ಶಾಕ್: 3 ಸಭೆಗೆ ಗೈರಾದರೆ ಮತದಾನದ ಹಕ್ಕಿಲ್ಲ -ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಕಾರ ಸಂಘಗಳ ಸದಸ್ಯರಿಗೆ ಬಿಗ್ ಶಾಕ್: 3 ಸಭೆಗೆ ಗೈರಾದರೆ ಮತದಾನದ ಹಕ್ಕಿಲ್ಲ -ಹೈಕೋರ್ಟ್

ಬೆಂಗಳೂರು: ಸಹಕಾರ ಸಂಘಗಳ 5 ವಾರ್ಷಿಕ ಮಹಾಸಭೆಗಳಲ್ಲಿ 3 ಸಭೆಗಳಿಗೆ ಗೈರಾದರೆ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಂಘದ ಸೇವೆಯನ್ನು ಸತತ ಮೂರು ವರ್ಷ ಬಳಸಿಕೊಳ್ಳದಿದ್ದರೆ ಸದಸ್ಯರು ಸಂಘದ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ.

ರಾಜ್ಯದ ವಿವಿಧ ಸಹಕಾರ ಸಂಘಗಳ ಸದಸ್ಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ ಸರ್ಕಾರದ ತಿದ್ದುಪಡಿ ಕ್ರಮ ಸರಿಯಿದೆ ಎಂದು ಅಭಿಪ್ರಾಯಪಟ್ಟು, ಎಲ್ಲ ತಕರಾರು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ.

ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಸೆಕ್ಷನ್ 20(ಎ) ಹೇಳುವ ಎರಡೂ ನಿಬಂಧನೆಗಳು 2021ರ ಆಗಸ್ಟ್ 4ರ ನಂತರ ನಡೆಯುವ ಚುನಾವಣೆಗಳಿಗೆ ಅನ್ವಯವಾಗುತ್ತವೆ ಎಂದು ಹೈಕೋರ್ಟ್ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...