ಬೆಂಗಳೂರು: ಮಾತೃ ಇಲಾಖೆಯಿಂದ ಮತ್ತೊಂದು ಇಲಾಖೆಗೆ ಎರವಲು ಸೇವೆಯಡಿ ನಿಯೋಜನೆಗೊಂಡ ಸರ್ಕಾರಿ ಅಧಿಕಾರಿ ಒಂದೇ ಹುದ್ದೆಯಲ್ಲಿ 2 ವರ್ಷ ಮುಂದುವರೆಯುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ಕಂದಾಯ ಇಲಾಖೆಗೆ ನಿಯೋಜನೆಗೊಂಡು ಬೆಂಗಳೂರು ದಕ್ಷಿಣ ತಾಲೂಕಿನ ಗ್ರೇಡ್ -1 ತಹಶೀಲ್ದಾರ್ ಹುದ್ದೆಯಲ್ಲಿ ಎಂಟು ತಿಂಗಳು ಸೇವೆ ಸಲ್ಲಿಸಿದ ಬಳಿಕ ಮಾತ್ರ ಇಲಾಖೆಗೆ ಸರ್ಕಾರ ವಾಪಸ್ ಕಳುಹಿಸಿದ್ದನ್ನು ಪ್ರಶ್ನಿಸಿ ಪಿ. ದಿನೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಉಮೇಶ್ ಎಂ. ಆಡಿಗ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಸ್ಪಷ್ಟನೆ ನೀಡಿ, ಸರ್ಕಾರಿ ಅಧಿಕಾರಿಗಳು ಒಂದೇ ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಯುವುದು ಕಡ್ಡಾಯ ಎನ್ನುವ ಅರ್ಜಿದಾರರ ವಾದವನ್ನು ಹೈಕೋರ್ಟ್ ಒಪಿಲ್ಲ. ಯಾವುದಾದರೂ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದಾಗ ಆ ಜಾಗಕ್ಕೆ ಮತ್ತೊಂದು ಇಲಾಖೆಯಿಂದ ಅಧಿಕಾರಿಗಳನ್ನು ಎರವಲು ಸೇವೆ ಪಡೆಯಲಾಗುವುದು. ಈ ಪ್ರಕರಣದಲ್ಲಿ ಅರ್ಜಿದಾರರು ಒಂದೇ ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಯಬೇಕೆಂಬುದು ಕಡ್ಡಾಯವಿಲ್ಲ ಎಂದು ತಿಳಿಸಿದೆ.