ಬೆಂಗಳೂರು: ವಂಚನೆ ಪ್ರಕರಣದಲ್ಲಿ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಆರ್.ಆರ್. ನಗರ ಠಾಣೆ ಪೋಲೀಸರು ಶಿಲ್ಪಾ ಗೌಡ ನೀಡಿದ್ದ ವಂಚನೆ ಪ್ರಕರಣ ಸಂಬಂಧ ಐಶ್ವರ್ಯಾ ಗೌಡ, ಅವರ ಪತಿ ಹರೀಶ್ ಅವರನ್ನು ಬಂಧಿಸಿದ್ದರು. ಈ ಹಿಂದೆ ಚಂದ್ರಾ ಲೇಔಟ್ ವಂಚನೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
3.5 ಕೋಟಿ ರೂಪಾಯಿ ಮೌಲ್ಯದ 430 ಗ್ರಾಂ ಚಿನ್ನ ಪಡೆದು ವಂಚಿಸಲಾಗಿದೆ ಎಂದು ಆರ್.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರ್.ಆರ್. ನಗರ ಠಾಣೆ ಪೋಲೀಸರು ಐಶ್ವರ್ಯ ಗೌಡ ಮತ್ತು ಪತಿ ಹರೀಶ್ ಅವರನ್ನು ಬಂಧಿಸಿ ನಾಲ್ಕನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು.
ಐಶ್ವರ್ಯಾ ಗೌಡಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.