alex Certify ದಾಸವಾಳ ಹೂವಿನಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಸವಾಳ ಹೂವಿನಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ದಾಸವಾಳವು ದೇವರ ಅಲಂಕಾರಕ್ಕೆ ಸೀಮಿತವಲ್ಲದೆ ಆರೋಗ್ಯಕ್ಕೂ ಬಹಳಷ್ಟು ಉಪಕಾರಿ. ಹೇಗೆ ಅಂತ ತಿಳಿಯಬೇಕಾ. ಇಲ್ಲಿದೆ ಅದರ ವಿವರ.

* ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ. ಹಾಗು ದೇಹದಲ್ಲಿ ಉಷ್ಣದ ಪ್ರಮಾಣ ಹೆಚ್ಚಿದ್ದರೆ ಕಡಿಮೆ ಆಗುತ್ತದೆ.

* ಋತು ಸಮಯದಲ್ಲಿ ಸ್ತ್ರೀಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸಿದರೆ ಅಧಿಕ ರಕ್ತಸ್ರಾವ ಕಡಿಮೆಯಾಗುತ್ತದೆ.

* ಮಕ್ಕಳು ಸಂಜೆ ಆಟವಾಡಿ ಮನೆಗೆ ಬಂದಾಗ ಅವರಿಗೆ ದಾಸವಾಳದ ಹೂವಿನ ರಸ ಅಥವಾ ದಾಸವಾಳದ ಗುಲ್ಕನ್ ತಿನ್ನಿಸುವುದರಿಂದ ಬಾಯಾರಿಕೆ, ದಣಿವು ತಕ್ಷಣ ಕಡಿಮೆಯಾಗುತ್ತದೆ.

* ಪ್ರತಿದಿನ 2 ರಿಂದ 3 ದಾಸವಾಳದ ಹೂಗಳನ್ನು ಹಸಿಯಾಗಿ ಜಗಿದು ನುಂಗಿದರೆ ರಕ್ತ ಮೂಲವ್ಯಾಧಿ ರೋಗ ನಿಯಂತ್ರಣಕ್ಕೆ ಬರುತ್ತದೆ.

* ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬಿಳಿ ದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಸೇರಿಸಿ ಕುದಿಸಿ ಆರಿಸಿಟ್ಟುಕೊಂಡು ಸುಟ್ಟಗಾಯಗಳಿಗೆ ಲೇಪಿಸಿದರೆ ಗಾಯ ಬೇಗನೆ ಗುಣವಾಗುತ್ತದೆ.

* ಬಿಳಿ ದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಂತು ಕೂದಲು ಸೊಂಪಾಗಿ ಬೆಳೆಯುತ್ತದೆ.

* ಬಿಳಿದಾಸವಾಳದ ಹೂವಿನ ರಸ ಚರ್ಮರೋಗದಿಂದ ಬಳಲುವವರಿಗೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...