alex Certify ಪೊಲೀಸ್​ ಪೇದೆ ಪ್ರವೇಶಾತಿ ಪರೀಕ್ಷೆಯಲ್ಲಿ ಹೈಟೆಕ್​ ನಕಲು: ಫೇಸ್ ಮಾಸ್ಕ್ ನಲ್ಲಿ ಸಿಮ್​ ಅಳವಡಿಸಿ ಸಿಕ್ಕಿಬಿದ್ದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಪೇದೆ ಪ್ರವೇಶಾತಿ ಪರೀಕ್ಷೆಯಲ್ಲಿ ಹೈಟೆಕ್​ ನಕಲು: ಫೇಸ್ ಮಾಸ್ಕ್ ನಲ್ಲಿ ಸಿಮ್​ ಅಳವಡಿಸಿ ಸಿಕ್ಕಿಬಿದ್ದ ಭೂಪ…!

ಪರೀಕ್ಷೆಯಲ್ಲಿ ನಕಲು ಚೀಟಿಯನ್ನು ತೆಗೆದುಕೊಂಡು ಹೋಗಲು ಕೆಲ ವಿದ್ಯಾರ್ಥಿಗಳು ಇನ್ನಿಲ್ಲದ ಪ್ಲಾನ್​ ರೂಪಿಸುತ್ತಾರೆ. ತಂತ್ರಜ್ಞಾನ ಅಭಿವೃದ್ಧಿವಾದಂತೆಲ್ಲ ಕಾಪಿ ಚೀಟಿ ಕೊಂಡೊಯ್ಯುವವರಿಗೆ ಈ ಕೆಲಸ ಇನ್ನಷ್ಟು ಸುಲಭವಾಗಿಬಿಟ್ಟಿದೆ. ಹೈಟೆಕ್​ ವಿಧಾನಗಳ ಮೂಲಕ ಪರೀಕ್ಷೆಗಳಲ್ಲಿ ನಕಲು ಹೊಡೆಯುತ್ತಾರೆ.

ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬ ಎಲೆಕ್ಟ್ರಾನಿಕ್​ ಸಾಧನವನ್ನು ಅಳವಡಿಸಲಾಗಿದ್ದ ಮಾಸ್ಕ್​ ಧರಿಸುವ ಮೂಲಕ ಹೈಟೆಕ್​ ನಕಲು ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಪಿಂಪರಿಯ ಹಿಂಜೇರ್ವಾಡಿ ಪ್ರದೇಶದ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ.

ಪರಿಶೀಲನೆ ನಡೆಸುತ್ತಿದ್ದ ವೇಳೆ ಪೊಲೀಸ್​ ಅಧಿಕಾರಿ ಶಶಿಕಾಂತ್​ ದೇವಕಾಂತ್​​ ಆರೋಪಿಯನ್ನು ಹಿಡಿದು ಫೇಸ್​ ಮಾಸ್ಕ್​ ಪುರಾಣ ಬಯಲಿಗೆಳೆದಿದ್ದಾರೆ. ಈ ಫೇಸ್​ ಮಾಸ್ಕ್​​ಗೆ ಜೆಬಿಎಸ್​ ಬ್ಯಾಟರಿ, ಏರ್​ಟೆಲ್​ ಸಿಮ್​ ಕಾರ್ಡ್​, ಸ್ವಿಚ್​ ಹಾಗೂ ಒಂದು ಮೈಕ್​ ಅಳವಡಿಸಲಾಗಿತ್ತು.

ಆರೋಪಿಯನ್ನು ಹಿಡಿಯೋವಷ್ಟರಲ್ಲಿ ಆತ ಸ್ಥಳದಿಂದ ಕಾಲ್ಕಿಳುವಲ್ಲಿ ಯಶಸ್ವಿಯಾಗಿದ್ದಾನೆ. ಆರೋಪಿ ಅಭ್ಯರ್ಥಿಯ ವಿರುದ್ಧ ಹಿಂಜೇವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...