alex Certify ಮಹಾತ್ಮಗಾಂಧಿಯವರ ಪಾತ್ರ ಹೊಂದಿರುವ ಟಾಪ್ 5 ಸಿನಿಮಾಗಳ್ಯಾವು ಗೊತ್ತಾ ? ಇಲ್ಲಿದೆ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾತ್ಮಗಾಂಧಿಯವರ ಪಾತ್ರ ಹೊಂದಿರುವ ಟಾಪ್ 5 ಸಿನಿಮಾಗಳ್ಯಾವು ಗೊತ್ತಾ ? ಇಲ್ಲಿದೆ ಪಟ್ಟಿ

Hey Ram, Lage Raho Munna Bhai and more: 5 stories that celebrate the enduring legacy of Mahatma Gandhi-Entertainment News , Firstpost

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ. ಭಾರತದ ಸ್ವಾತಂತ್ಯ್ರ ಹೋರಾಟದಲ್ಲಿ ಸತ್ಯ, ಅಹಿಂಸೆಯ ಮಾರ್ಗದಲ್ಲಿ ಹೋರಾಡಿದ ಈ ಮಹಾತ್ಮನ ಸ್ಮರಣೆ ದೇಶಾದ್ಯಂತ ನಡೆಯುತ್ತಿದೆ.

ಜಗತ್ತಿನ ಪ್ರಮುಖ ನಾಯಕರಾದ ನೆಲ್ಸನ್ ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರಂಥರನ್ನು ಪ್ರೇರೇಪಿಸಿದ ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯವರದ್ದು. 2019 ರಲ್ಲಿ ಮಹಾತ್ಮ ಗಾಂಧಿಯವರ ಜನ್ಮದಿನದ 150 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ವೇಳೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಗಾಂಧಿಯನ್ನು ಶಾಂತಿಯ ಜಾಗತಿಕ ಐಕಾನ್ ಮತ್ತು ಅತ್ಯಂತ ದುರ್ಬಲರ ಪರ ವಕೀಲರು ಎಂದು ಶ್ವಾಘಿಸಿದ್ದರು.

ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಜೀವನಗಾಥೆ ಅನೇಕ ಚಿತ್ರ ನಿರ್ದೇಶಕರು ಮತ್ತು ನಾಟಕಕಾರರನ್ನೂ ಪ್ರೇರೇಪಿಸಿದೆ. ಅವರ ಪಾತ್ರವನ್ನು ಒಳಗೊಂಡ ಅನೇಕ ಚಲನಚಿತ್ರಗಳು ಬೆಳ್ಳಿತೆರೆ ಮೇಲೆ ಬಂದಿದ್ದು, ಬಾಪು ಅವರ ಜನ್ಮದಿನದಂದು ಅಂತಹ ಕೆಲವು ಚಲನಚಿತ್ರಗಳು ಯಾವುವುಗಳೆಂದು ನೋಡುವುದಾದರೆ,

01. ಶೋಭಾಯಾತ್ರಾ

ಈ ಚಿತ್ರದಲ್ಲಿ ಗಾಂಧಿ, ಬೋಸ್, ತಿಲಕ್, ನೆಹರು ರಂತಹ ನಾಯಕರ ನಡುವಿನ ಹೋರಾಟದ ವ್ಯತ್ಯಾಸಗಳನ್ನು ತಿಳಿಸಲಾಗಿದೆ. ಇದರಲ್ಲಿನ ನಿರೂಪಣೆಯು ಇಂದಿಗೂ ಗಾಂಧಿಯ ಮೌಲ್ಯಗಳ ಪ್ರಸ್ತುತತೆಯನ್ನು ಸೂಕ್ಷ್ಮವಾಗಿ ಸ್ಥಾಪಿಸುತ್ತದೆ ಮತ್ತು ಇತಿಹಾಸದ ನಿರ್ಣಾಯಕ ಘಟ್ಟಕ್ಕೆ ಬರಲು ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಆದರ್ಶವಾದದಿಂದ ಎಷ್ಟು ದೂರ ಪ್ರಯಾಣಿಸಿದ್ದೇವೆ ಎಂಬುದನ್ನು ನೆನಪಿಸುತ್ತದೆ. ಅಹಿಂಸೆ, ಪ್ರಾಮಾಣಿಕತೆ, ಸತ್ಯ ಮತ್ತು ಧೈರ್ಯದ ದರ್ಶನವನ್ನು ಈ ಚಿತ್ರ ನೀಡುತ್ತದೆ.

ಗಣೇಶ್ ಯಾದವ್ ಮತ್ತು ಅತ್ತರ್ ಸಿಂಗ್ ಸೈನಿ ಇದನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಆನಂದ್ ಅಲ್ಕುಂಟೆ, ಅಯಾಜ್ ಖಾನ್, ಮಾನ್ಸಿ ಮುಲ್ತಾನಿ, ನಿಖಿಲ್ ರತ್ನಪರಾಖಿ ಮತ್ತು ಸುಮುಖ ಎಸ್ ಸಹ ನಟಿಸಿದ್ದಾರೆ.

02. ದಿ ಮೇಕಿಂಗ್ ಆಫ್ ದಿ ಮಹಾತ್ಮ

ಶ್ಯಾಮ್ ಬೆನಗಲ್ ನಿರ್ದೇಶಿಸಿದ ಈ ಚಿತ್ರ 1996 ರಲ್ಲಿ ಬಿಡುಗಡೆಯಾಯಿತು. ಫಾತಿಮಾ ಮೀರ್ ಅವರ ‘ದಿ ಅಪ್ರೆಂಟಿಸ್‌ಶಿಪ್ ಆಫ್ ಎ ಮಹಾತ್ಮ’ ಪುಸ್ತಕವನ್ನು ಆಧರಿಸಿದ ಕಥೆ ಇದಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 21 ಮಹತ್ವದ ವರ್ಷಗಳು ಗಾಂಧೀಜಿಯ ಮೇಲೆ ಹೇಗೆ ಗಾಢವಾಗಿ ಪ್ರಭಾವ ಬೀರಿದವು, ಅವರ ರಾಜಕೀಯ ಸಿದ್ಧಾಂತವನ್ನು ರೂಪಿಸಿದವು, ನ್ಯಾಯ ಮತ್ತು ಸಮಾನತೆಗಾಗಿ ಅವರಲ್ಲಿ ಉತ್ಸಾಹವನ್ನು ಸೃಷ್ಟಿಸಿದವು ಮತ್ತು ಜಗತ್ತು ಗೌರವಿಸುವ ಮಹಾತ್ಮರನ್ನಾಗಿ ಮಾಡಿದವು ಎಂಬುದನ್ನು ಇದು ವಿವರಿಸುತ್ತದೆ. ಈ ಚಿತ್ರವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತರರಾಷ್ಟ್ರೀಯ ಸಹ-ನಿರ್ಮಾಣವಾಗಿತ್ತು.

03. ಹೇ ರಾಮ್

ಈ ಚಿತ್ರವು ಸಾಕೇತ್ ರಾಮ್ ಕಥೆಯ ಮೂಲಕ ಸೇಡು ಮತ್ತು ಕ್ಷಮೆಯ ಅವಳಿ ಕಲ್ಪನೆಗಳನ್ನು ಬಿಂಬಿಸುತ್ತದೆ. ವಿರುದ್ಧ ದೃಷ್ಟಿಕೋನಗಳ ನಡುವಿನ ಯಾವುದೇ ಬಿಕ್ಕಟ್ಟನ್ನು ಸ್ವೀಕಾರ ಮತ್ತು ಅಹಿಂಸೆಯ ಮೂಲಕ ನಿವಾರಿಸಬಹುದು ಎಂದು ಚಿತ್ರ ತೋರಿಸುತ್ತದೆ. ಸಾಕೇತ್ ರಾಮ್ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ, ವಸುಂಧರಾ ದಾಸ್, ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಶಾ ಮತ್ತು ಓಂ ಪುರಿ ಕೂಡ ಇದ್ದಾರೆ. ಇದನ್ನು ಅಮೆಜಾನ್ ಪ್ರೈಮ್ ಮತ್ತು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

04. ಲಗೇ ರಹೋ ಮುನ್ನಾ ಭಾಯಿ

ಗುರಿಯಿಲ್ಲದ ಬೀದಿ ರೌಡಿ ಮುನ್ನಾನ ಜೀವನದಲ್ಲಿ ಗಾಂಧಿಯ ಮೌಲ್ಯಗಳು ಪ್ರಭಾವ ಬೀರುವ ಕಥಾಹಂದರವನ್ನು ಹೊಂದಿದೆ. ಸುಂದರವಾದ ರೇಡಿಯೋ ಜಾಕಿಯ (ವಿದ್ಯಾ ಬಾಲನ್) ಪ್ರೀತಿಯನ್ನು ಗೆಲ್ಲಲು ತನ್ನನ್ನು ತಾನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಗಾಂಧಿಯ ಮೌಲ್ಯಗಳು ಪ್ರತಿ ಬಿಕ್ಕಟ್ಟನ್ನು ನಗುವಿನೊಂದಿಗೆ ಎದುರಿಸಲು ಮುನ್ನಾಗೆ ನೆರವಾಗುತ್ತವೆ. ಈ ಚಿತ್ರವು 2006ರಲ್ಲಿ ಬಿಡುಗಡೆಯಾದಾಗ ಸಂಚಲನವನ್ನು ಸೃಷ್ಟಿಸಿತು. ಸಂಜಯ್ ದತ್, ಅರ್ಷದ್ ವಾರ್ಸಿ, ದಿಲೀಪ್ ಪ್ರಭಾವಲ್ಕರ್, ಜಿಮ್ಮಿ ಶೆರ್ಗಿಲ್, ದಿಯಾ ಮಿರ್ಜಾ, ಬೊಮನ್ ಇರಾನಿ ಮತ್ತು ಇತರರು ಇದರಲ್ಲಿ ನಟಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

05. ಗಾಂಧಿ

ರಿಚರ್ಡ್ ಅಟೆನ್‌ಬರೋ ನಿರ್ದೇಶಿಸಿದ ಈ ಚಿತ್ರ ಮೆಚ್ಚುಗೆ ಪಡೆದಿದೆ. ಗಾಂಧೀಜಿಯವರ ಜೀವನಚರಿತ್ರೆಯ ಚಿತ್ರವು ಇದಾಗಿದ್ದು ಗಾಂಧಿಯವರ ಜೀವನದ ನಿರ್ಣಾಯಕ ತಿರುವುಗಳನ್ನು ತೋರಿಸುತ್ತದೆ. ದಕ್ಷಿಣ ಆಫ್ರಿಕಾದಿಂದ ಅವರು ಭಾರತಕ್ಕೆ ಹಿಂದಿರುಗಿದಾಗ ಜನರು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ಎಲ್ಲಾ ಲೌಕಿಕ ಆಸ್ತಿಗಳನ್ನು ತ್ಯಜಿಸಿ ಸಮರ್ಪಿಸಿಕೊಂಡಿದ್ದನ್ನು ಚಿತ್ರೀಕರಿಸಲಾಗಿದೆ.

ಬೆನ್ ಕಿಂಗ್‌ ಸ್ಲೇ ಅವರು ಗಾಂಧಿ ಪಾತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು. ಭಾರತದವರೇ ಆದ ಭಾನು ಅಥೈಯಾ ಅವರು ಈ ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದರು. ಚಿತ್ರದಲ್ಲಿ ಕ್ಯಾಂಡಿಸ್ ಬರ್ಗೆನ್, ಎಡ್ವರ್ಡ್ ಫಾಕ್ಸ್, ಜಾನ್ ಗೀಲ್‌ಗುಡ್, ಟ್ರೆವರ್ ಹೊವಾರ್ಡ್, ಜಾನ್ ಮಿಲ್ಸ್, ಮಾರ್ಟಿನ್ ಶೀನ್ ಮತ್ತು ರೋಹಿಣಿ ಹತ್ತಂಗಡಿ ಸಹ ನಟಿಸಿದ್ದಾರೆ. ನೀವು ಇದನ್ನು ಜಿಯೋ ಸಿನಿಮಾ ಮತ್ತು ನೆಟ್‌ಫ್ಲಿಕ್ಸ್ ನಲ್ಲಿ ವೀಕ್ಷಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...