23 ವರ್ಷದ ಕ್ರಿಸ್ಟಿಯಾನ್ ರೊಯಿಟ್‌ಗೆರಿಂಗ್‌ಗೆ ಕೇವಲ ಎಫ್‌ಸಿ 20 ಫುಟ್ಬಾಲ್ ಕ್ಲಬ್ ಬಗ್ಗೆ ಒಲವಿತ್ತು. ಅವರ ಪಂದ್ಯ ನೋಡಲು ಅ.17 ರಂದು ನೆದರ್‌ಲ್ಯಾಂಡ್‌ನ ಡೆ ಗ್ರಾಲ್ಶ್ ವೆಸ್ಟಿ ಕ್ರೀಡಾಂಗಣಕ್ಕೆ ಬಂದಿದ್ದ. ಆತನ ಸ್ನೇಹಿತರ ಒತ್ತಾಯದ ಮೇರೆಗೆ ಆತ ಮಾಡಿದ ಸಾಹಸವು ಒಂದೇ ದಿನದಲ್ಲಿ ಆತನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟಾರ್ ಮಾಡಿಬಿಟ್ಟಿತು.
ಒಟ್ಟು ಐದು ಟ್ರೇಗಳನ್ನು ಆತ ಬಹಳ ಎಚ್ಚರಿಕೆಯಿಂದ ಕ್ರೀಡಾಂಗಣದ ಹೊರಗಿನಿಂದ ತಂದು ಸ್ನೇಹಿತರಿಗೆ ಕೊಟ್ಟ. ಇವು ಬರೀ ಟ್ರೇಗಳಾಗಿರಲಿಲ್ಲ, ಬರೋಬ್ಬರಿ 48 ಬಿಯರ್ ಭರಿತ ಕಪ್‌ಗಳಿದ್ದ ಟ್ರೇಗಳಾಗಿದ್ದವು. ಸ್ವಲ್ಪ ಎಚ್ಚರ ತಪ್ಪಿದ್ದರೂ ಕೂಡ ಅಷ್ಟೂ ಬಿಯರ್ ನೆಲಸಮ ಆಗುತ್ತಿತ್ತು. ಜತೆಗೆ ಸ್ನೇಹಿತರಿಂದ ಬೈಗುಳ ಕೂಡ ಕೇಳಬೇಕಿತ್ತು.
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಲೀಟರ್ ಗೆ 15 ರೂ. ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ
ಅಂದಹಾಗೇ, ಕೈನಲ್ಲಿ ಒಂದೇ ಕ್ರೇಟ್ ಹಿಡಿದು ಹೋಗಬಹುದಿತ್ತಲ್ಲ ಎಂದು ಹಲವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಬುದ್ಧಿಬಂತರೊಬ್ಬರು ಉತ್ತರಿಸಿ, ” ವಿಶೇಷ ಕೌಶಲ್ಯ ಇರುವ ಕ್ರಿಸ್ಟಿಯಾನ್ ಒಂದೇ ಬಾರಿಗೆ ತೆರಳಿ ಬಿಯರ್ ಗಳಷ್ಟನ್ನೂ ಬಾಚಿ ತಂದ. ಸಾಮಾನ್ಯರಿಗೆ ಐದು ಬಾರಿ ಅಲೆಯುವ ಜಂಜಾಟ ಇರುತ್ತಿತ್ತು. ಅಷ್ಟರಲ್ಲಿ ಸ್ಟೇಡಿಯಂ ಒಳಗಡೆ ಮ್ಯಾಚ್ ಮುಗಿದಿರುತ್ತಿತ್ತು” ಎಂದು ವಿವರಿಸಿದ್ದಾರೆ. veronica.inside ಖಾತೆಯಲ್ಲಿ ವಿಡಿಯೊ ವೀಕ್ಷ ಣೆಗೆ ಲಭ್ಯವಿದೆ.
https://www.youtube.com/watch?v=kezz2MYonPE&feature=youtu.be