ಕ್ರಿಕೆಟ್ ಮೈದಾನದ ಬೌಂಡರಿ ಬಳಿ ಕ್ಷೇತ್ರ ರಕ್ಷಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೊಸ ಆಯಾಮವನ್ನೇ ಪಡೆದಿದ್ದು, ಬೌಂಡರಿಯಂಚಿನಲ್ಲಿ ಸಿಕ್ಸ್ ಆಗಬಹುದಾದ ಚೆಂಡುಗಳನ್ನೂ ಸಹ ಅದ್ಭುತ ಕಸರತ್ತಿನ ಮೂಲಕ ಹಿಡಿತಕ್ಕೆ ಪಡೆಯುವ ಚಾಣಾಕ್ಷ ಕ್ಷೇತ್ರರಕ್ಷಕರು ಕ್ರಿಕೆಟ್ ಪ್ರಿಯರಿಗೆ ಭಾರೀ ಇಷ್ಟವಾಗುತ್ತಾರೆ.
ಇಂಥ ಇಬ್ಬರು ಕ್ಷೇತ್ರ ರಕ್ಷಕರೆಂದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್. ಇದೀಗ ಇಬ್ಬರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆಯೊಂದು ಮೂಡಿದೆ.
ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಮೆಂಟ್ ವೇಳೆ ಈ ಪ್ರಶ್ನೆಯನ್ನು ಅಭಿಮಾನಿಗಳಿಗೆ ಕೇಳಲಾಗಿತ್ತು. “ಲಾಂಗ್-ಆಫ್ ಬೌಂಡರಿ ಬಳಿ ನಿಲ್ಲಲು ನೀವು ಯಾರನ್ನು ಆಯ್ಕೆ ಮಾಡುತ್ತೀರಿ?” ಎಂದು ಕೇಳಲಾದ ಪ್ರಶ್ನೆಗೆ ಖುದ್ದು ಉತ್ತರಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಡೇವಿಡ್ ವಾರ್ನರ್, “ಪೊಲಾರ್ಡ್ ನನಗಿಂತ ಬರೀ ಮೂರು ಅಡಿ ಎತ್ತರವಿದ್ದಾರೆ ಅಷ್ಟೇ” ಎಂದು ಫನ್ನಿ ಉತ್ತರ ಕೊಟ್ಟಿದ್ದಾರೆ.
ತಮ್ಮ ಈ ಪ್ರತಿಕ್ರಿಯೆಗೆ ಪೊಲಾರ್ಡ್‌ರನ್ನು ಟ್ಯಾಗ್ ಮಾಡಿದ ವಾರ್ನರ್, ವಿಂಡೀಸ್ ದೈತ್ಯನಿಗೆ ಆತನ ಎತ್ತರ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಕೆನಡಾ ಆಯೋಜಿಸುವ ಜಿಟಿ20 ಟೂರ್ನಮೆಂಟ್‌ನ ಮೊದಲ ಅವತರಣಿಕೆಯನ್ನು 2018ರಲ್ಲಿ ಆಯೋಜಿಸಲಾಗಿತ್ತು.