ಕರೌರಿ: ರಾಜಸ್ಥಾನದ ಕರೌಲಿಯ ಕೈಮ್‌ಕಚ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೊಸಳೆಯೊಂದಿಗೆ ಹೋರಾಡಿ ಪತಿಯನ್ನು ಉಳಿಸಿಕೊಂಡಿದ್ದಾಳೆ. ಪತಿಯನ್ನು ಮೊಸಳೆ ದಾಳಿಯಿಂದ ರಕ್ಷಿಸಿದ್ದಾಳೆ.
26 ವರ್ಷದ ದನಗಾಹಿ ಬನ್ನೆ ಸಿಂಗ್ ತನ್ನ ಮೇಕೆಗಳಿಗೆ ನೀರು ಕೊಡಲು ಚಂಬಲ್ ನದಿಗೆ ತೆರಳಿದ್ದ ವೇಳೆ ಮೊಸಳೆ ಹೊಂಚು ಹಾಕಿ ಆತನ ಕಾಲನ್ನು ಹಿಡಿದಿದೆ. ಸಮೀಪದಲ್ಲಿ ನಿಂತಿದ್ದ ಪತ್ನಿ ವಿಮಲ್ ಬಾಯಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾಳೆ. ಅವಳ ಬಳಿ ಕೇವಲ ಕೋಲು ಇತ್ತು. ಅದರಿಂದಲೇ ಶಕ್ತಿಯನ್ನೆಲ್ಲಾ ಹಾಕಿ ಮೊಸಳೆಗೆ ಹೊಡೆದಿದ್ದಾಳೆ.
ಆದರೆ ಮೊಸಳೆ ಹಿಡಿತ ಕೇಳಬೇಕೆ? ಅದು ಪತಿಯನ್ನು ನೀರಿನಲ್ಲಿ ಆಳವಾಗಿ ಎಳೆಯಲು ಪ್ರಾರಂಭಿಸಿತು. ಕೂಡಲೇ ವಿಮಲ್ ಬಾಯಿ ಕೋಲನ್ನು ಮೊಸಳೆಯ ಕಣ್ಣಿಗೆ ಚುಚ್ಚಿದಳು. ಇದರಿಂದ ನೋವಿನಿಂದ ಒದ್ದಾಡಿದ ಮೊಸಳೆ ಬನ್ನೆ ಸಿಂಗ್‌ನ ಮೇಲೆ ತನ್ನ ಹಿಡಿತವನ್ನು ಬಿಟ್ಟಿತು. 15 ನಿಮಿಷಗಳ ಅಗ್ನಿಪರೀಕ್ಷೆಯಲ್ಲಿ ವಿಮಲ್ ಬಾಯಿ ಮತ್ತು ಪತಿ ಗೆದ್ದಿದ್ದಾರೆ.
https://twitter.com/rajender_bagdi/status/1646077046769201152?ref_src=twsrc%5Etfw%7Ctwcamp%5Etweetembed%7Ctwterm%5E1646077046769201152%7Ctwgr%5E3d4bc07078202c1b8510227bea2f01523d1bd1db%7Ctwcon%5Es1_&ref_url=https%3A%2F%2Fwww.news18.com%2Fbuzz%2Fheroic-woman-battles-deadly-crocodile-with-a-stick-to-save-husbands-life-7530427.html