ಭಾರತದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಖರೀದಿಯ ಸಂಖ್ಯೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಹಲವಾರು ಕಂಪನಿಗಳು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳನ್ನು ತಯಾರಿಸುತ್ತಿದೆ. ಇದೀಗ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಹೀರೋ ಸ್ಪ್ಲೆಂಡರ್ ಅನ್ನು ಸಹ ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲಾಗಿದೆ. ಜಿಒಜಿಒಎ1 ತಂಡ ವಿಡಿಯೋದಲ್ಲಿ ವಿವರಗಳನ್ನು ನೀಡಿದೆ.
ಜಿಒಜಿಒಎ1 ನ ಎಲೆಕ್ಟ್ರಿಕ್ ವಾಹನದ ಪರಿವರ್ತನೆ ಕಿಟ್‌ನ ಬೆಲೆ 35,000 ರೂ. ಆಗಿದೆ. ಈ ಎಲೆಕ್ಟ್ರಿಕ್ ಬೈಕ್ ಒಂದೇ ಚಾರ್ಜ್‌ನಲ್ಲಿ 151 ಕಿ.ಮೀ ವ್ಯಾಪ್ತಿವರೆಗೆ ಓಡಬಲ್ಲದು. ಮೋಟಾರ್ ಸೈಕಲ್‌ಗಳಿಗೆ ಆರ್ ಟಿಒ ಅನುಮೋದಿತ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳನ್ನು ಒದಗಿಸುವುದರ ಜೊತೆಗೆ, ಕಂಪನಿಯು ಕಳೆದ ಎರಡು ತಿಂಗಳುಗಳಲ್ಲಿ ಶೇ.60ರಷ್ಟು ಬೇಡಿಕೆಯ ಹೆಚ್ಚಳವನ್ನು ಕಂಡಿದೆ. ಹೀಗಾಗಿ ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿದೆ.
ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಆರ್.ಟಿ.ಒ. ಅನುಮೋದಿತವಾಗಿರುವುದರಿಂದ ಅಪಘಾತದಲ್ಲಿ ಮೋಟಾರ್‌ಸೈಕಲ್ ಹಾನಿಗೊಳಗಾದರೆ, ವಿಮಾ ಕಂಪನಿ ಮುಖಾಂತರ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದು.
ಹೆಚ್ಚುವರಿಯಾಗಿ, ನಿಯಂತ್ರಕ ಮತ್ತು ಮೋಟಾರಿಗೆ ಮೂರು ವರ್ಷದ ವಾರಂಟಿ ಇರುತ್ತದೆ. ಕಿಟ್‌ನೊಂದಿಗೆ ಅಳವಡಿಸಿದ ನಂತರ ಹಸಿರು ಬಣ್ಣದ ಹೊಸ ನಂಬರ್ ಪ್ಲೇಟ್ ಅನ್ನು ಅಳಡಿಸಲಾಗುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅನುಸಾರವನ್ನು ಸಹ ಇದು ಅನುಸರಿಸುತ್ತದೆ.
ಈ ಕಿಟ್ ಅನ್ನು ಬಳಸುವುದರಿಂದ, ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆಯಾಗುವ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಅಗತ್ಯವಿಲ್ಲ. ಜಿಒಜಿಒಎ1 ಪ್ರಸ್ತುತ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.