alex Certify ಬ್ರಾಂಡ್‌ ನೇಮ್‌ ಗಾಗಿ ನ್ಯಾಯಾಲಯದ ಮೆಟ್ಟಿಲೇರಿದ ʼಹೀರೋ ಮೋಟಾರ್ಸ್‌ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾಂಡ್‌ ನೇಮ್‌ ಗಾಗಿ ನ್ಯಾಯಾಲಯದ ಮೆಟ್ಟಿಲೇರಿದ ʼಹೀರೋ ಮೋಟಾರ್ಸ್‌ʼ

ದೇಶದಲ್ಲಿ ಪೆಟ್ರೋಲ್‌ ದರವು ನೂರರ ಗಡಿ ದಾಟಿದ್ದು, ಜನರು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಮುಖ ಮಾಡಿದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಕೈಗೆಟಕುವ ದರದಲ್ಲಿ, ಭರವಸೆಯ ಕಂಪನಿಯೊಂದರ ಎಲೆಕ್ಟ್ರಿಕ್‌ ಸ್ಕೂಟರ್‌ ಅಥವಾ ಬೈಕ್‌ ಲಭ್ಯವಿಲ್ಲ.

ಪೆಟ್ರೋಲ್‌ ಚಾಲಿತ ಬೈಕ್‌ಗಳಲ್ಲಿ ಅತ್ಯಧಿಕ ಮಾರಾಟವಾಗುವ ಮತ್ತು ಜನರ ಭರವಸೆ ಗೆದ್ದಿರುವ ಭಾರತದ ’’ಹೀರೋ ಮೋಟಾರ್ಸ್‌’’ ಕಂಪನಿಯು ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲೂ ಸರದಾರನಂತೆ ಮೆರೆಯುವುದು ಬಿಟ್ಟು ಕೌಟುಂಬಿಕ ಕಲಹದಲ್ಲಿ ಮುಳುಗಿರುವುದು ದುರಂತವೇ ಸರಿ.

BIG NEWS: SC/ST ಉದ್ಯೋಗ, ಶಿಕ್ಷಣ, ಭೂಮಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಬೇರೆ ರಾಜ್ಯದಲ್ಲಿ ಪ್ರಯೋಜನ ಪಡೆಯಲು ಸಾಧ್ಯವಿಲ್ಲ

ಮುಂಜಾಲ್‌ ಕುಟುಂಬದ ಒಡೆತನಕ್ಕೆ ಹೀರೋ ಮೋಟಾರ್ಸ್‌ ಕಂಪನಿ ಸೇರುತ್ತದೆ. ಈ ಕಂಪನಿಯ ಎಲೆಕ್ಟ್ರಿಕ್‌ ವಾಹನಗಳ ಪ್ರತ್ಯೇಕ ವಿಭಾಗ ’’ಹೀರೋ ಎಲೆಕ್ಟ್ರಿಕ್‌’’ ಕಳೆದ 15 ವರ್ಷಗಳಿಂದ ಇದೆ. ಆದರೆ, ಅದಕ್ಕೆ ಶಕ್ತಿ ತುಂಬುವ ಕಾಲವು ಸದ್ಯ ಸನ್ನಿಹಿತವಾಗಿದೆ. ಆದರೆ, ಹೀರೋ ಮೋಟಾರ್‌ ಕಾರ್ಪೊರೇಷನ್ ಮುಖ್ಯಸ್ಥ ಪವನ್‌ ಮುಂಜಾಲ್‌ ಅವರನ್ನು ಹೀರೋ ಎಲೆಕ್ಟ್ರಿಕ್‌ ಮಾಲೀಕರಾದ ವಿಜಯ್‌ ಮುಂಜಾಲ್‌ ಹಾಗೂ ಅವರ ಮಗ ನವೀನ್‌ ಮುಂಜಾಲ್‌ ಕೋರ್ಟ್‌ಗೆ ಎಳೆದೊಯ್ದಿದ್ದಾರೆ.

ತಾವು ’’ಹೀರೋ’’ ಬ್ರ್ಯಾಂಡ್‌ ನೇಮ್‌ ಬಳಸದಂತೆ ಕೌಟುಂಬಿಕವಾಗಿ ಒತ್ತಾಯ ಹೇರಲಾಗಿದೆ. ಆದರೆ, 2010ರಲ್ಲಿ ಕುಟುಂಬದ ಉದ್ಯಮ ಹಂಚಿಕೆ ವೇಳೆ ತಮಗೆ ಹೀರೋ ಎಲೆಕ್ಟ್ರಿಕ್‌ ನೀಡಲಾಗಿದ್ದು ಆ ವೇಳೆ ಹೀರೋ ಬ್ರ್ಯಾಂಡ್‌ ನೇಮ್‌ ಬಳಕೆಗೆ ಅನುಮತಿಸಲಾಗಿತ್ತು ಎಂದು ವಿಜಯ್‌ ವಾದಿಸಿದ್ದಾರೆ.

ಇನ್ನೊಂದೆಡೆ, ಹೀರೋ ಮೋಟಾರ್ಸ್‌ ತನ್ನ ಹೊಸ ಎಲೆಕ್ಟ್ರಿಕ್‌ ವಾಹನಗಳಿಗೆ ’’ಹೀರೋ’’ ಬ್ರ್ಯಾಂಡ್‌ ನೇಮ್‌ ಬಳಸಬಾರದು ಎಂದು ಕೂಡ ಕೋರ್ಟ್‌ಗೆ ಮೊರೆ ಹೋಗಲಾಗಿದೆ.

ಇದರ ಬೆನ್ನಿಗೇ ಹೀರೋ ಮೋಟಾರ್ಸ್‌ ಕಂಪನಿಯು ’’ವಿದಾ’’ ಎಂಬ ಹೆಸರಲ್ಲಿ ತಮ್ಮ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಮತ್ತು ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...