alex Certify 2022ರ ವೇಳೆಗೆ 10000 ಚಾರ್ಜಿಂಗ್​ ಸ್ಟೇಷನ್​ ನಿರ್ಮಾಣಕ್ಕೆ ಮುಂದಾದ ಹೀರೋ ಎಲೆಕ್ಟ್ರಿಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022ರ ವೇಳೆಗೆ 10000 ಚಾರ್ಜಿಂಗ್​ ಸ್ಟೇಷನ್​ ನಿರ್ಮಾಣಕ್ಕೆ ಮುಂದಾದ ಹೀರೋ ಎಲೆಕ್ಟ್ರಿಕ್​..!

ಎಲೆಕ್ಟ್ರಿಕ್​ ದ್ವಿಚಕ್ರ ವಾಹನವನ್ನು ನಿರ್ಮಿಸುವ ಹೀರೋ ಎಲೆಕ್ಟ್ರಿಕ್​ ಕಂಪನಿಯು 10 ಸಾವಿರ ಚಾರ್ಜಿಂಗ್​​ ಕೇಂದ್ರಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ದೇಶಾದ್ಯಂತ ಚಾರ್ಜಿಂಗ್​ ಮೂಲಸೌಕರ್ಯವನ್ನು ನಿರ್ಮಿಸುವ ಸಲುವಾಗಿ ಬೃಹತ್​ ಮೊಬಿಲಿಟಿಯೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಮುಂದಿನ ವರ್ಷದಿಂದ ಚಾರ್ಜಿಂಗ್​ ಕೇಂದ್ರಗಳ ಸ್ಥಾಪನೆಯಾಗಲಿದೆ ಎಂದು ಕಂಪನಿ ಹೇಳಿದೆ.

ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಈ ಬೃಹತ್​ ಯೋಜನೆಗೆ ಮುಂದಾಗಿದ್ದು 2022ರ ವೇಳೆ ನಮ್ಮ ಗುರಿಯನ್ನು ತಲುಪಲಿದ್ದೇವೆ ಎಂದು ಹಿರೋ ಎಲೆಕ್ಟ್ರಿಕ್​ ಮಾಹಿತಿ ನೀಡಿದೆ.

ಚಾರ್ಜಿಂಗ್​ ಸ್ಟೇಷನ್​ಗಳನ್ನು ಬಳಕೆ ಮಾಡುವ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಸರ್ವೇಯನ್ನೂ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಈ ಸಮೀಕ್ಷೆಯಲ್ಲಿ ತಿಳಿದು ಬಂದ ವಿಷಯ ಏನೆಂದರೆ ಗ್ರಾಹಕರು ಸ್ಮಾರ್ಟ್ ಚಾರ್ಜಿಂಗ್​ ಸ್ಟೇಷನ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಅಂದರೆ ಅಪ್ಲಿಕೇಷನ್​ಗಳ ಮೂಲಕ ಸ್ಟೇಷನ್​ಗಳನ್ನು ಪತ್ತೆ ಮಾಡಲು ಸಾಧ್ಯವಾಗಬೇಕು. ಚಾರ್ಜಿಂಗ್​ ಸ್ಟೇಷನ್​ಗಳಲ್ಲಿ ವೈ ಫೈ ಸೌಕರ್ಯ ಹಾಗೂ ಯುಪಿಐ ಪಾವತಿಯಂತಹ ಸೌಕರ್ಯಗಳನ್ನು ಗ್ರಾಹಕರು ಬಯಸುತ್ತಿದ್ದಾರೆ ಅನ್ನೋದು ಸರ್ವೇಯಲ್ಲಿ ತಿಳಿದುಬಂದಿದೆ.

ದೇಶದಲ್ಲಿ ಇಂಧನದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಜಿಂಗ್​ ಸ್ಟೇಷನ್​ಗಳ ನಿರ್ಮಾಣ ಜನತೆಗೆ ಎಲೆಕ್ಟ್ರಿಕ್​ಬೈಕ್​ಗಳ ಮಾರುಕಟ್ಟೆಗೆ ಇನ್ನಷ್ಟು ಪುಷ್ಟಿ ನೀಡಲಿದೆ ಎಂದು ಕಂಪನಿ ಸಿಇಓ ಸೋಹಿಂದರ್​ ಗಿಲ್​ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...