ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಅವರು ತಪ್ಪದೇ ಮತದಾನದ ಹಕ್ಕು ಚಲಾಯಿಸುತ್ತಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸೈಕಲ್ ತುಳಿದುಕೊಂಡು ಬಂದು ವಿಜಯ್ ಮತ ಚಲಾಯಿಸಿದ್ದರು. ಈ ಮೂಲಕ ಸಂವಿಧಾನ ನೀಡಿರುವ ಜನಪ್ರತಿನಿಧಿ ಆಯ್ಕೆ ಹಕ್ಕನ್ನು ತಪ್ಪದೇ ಬಳಸಿಕೊಳ್ಳಿರಿ ಎಂಬ ಸಂದೇಶವನ್ನು ಜನರಿಗೆ ಮುಟ್ಟಿಸಿದ್ದರು.
ಇದೇ ಫೆ.19 ರಂದು ತಮಿಳುನಾಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕೂಡ ತಪ್ಪದೇ ಮತಗಟ್ಟೆಗೆ ಬಂದು ವಿಜಯ್ ಅವರು ವೋಟ್ ಮಾಡಿದ್ದಾರೆ. 21 ಪಾಲಿಕೆಗಳು, 138 ನಗರಸಭೆಗಳು ಮತ್ತು 489 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ.
ಬೇಟೆಯಾಡಲು ಬಂದ ಚಿರತೆಯನ್ನೇ ಬೆದರಿಸಿದ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ
ಕೆಂಪು ಬಣ್ಣದ ಸೆಲೆರಿಯೊ ಕಾರಿನಲ್ಲಿ ನಿಳಂಗರೈ ಮತಗಟ್ಟೆಗೆ ಆಗಮಿಸಿದ ನಟ ವಿಜಯ್ ತಮ್ಮ ವೋಟು ಹಾಕಿ ತೆರಳಿದ್ದಾರೆ. ಈ ಬಾರಿ ಸುಮ್ಮನೆ ತೆರಳುವ ಬದಲು ವಿವಾದವನ್ನು ಮೈಮೇಲೆ ಎಳೆದುಕೊಂಡು ಹೋಗಿದ್ದಾರೆ. ಅವರು ಬಂದಿದ್ದ ಕೆಂಪು ಬಣ್ಣದ ಕಾರಿನ ವಿಮೆ ಅವಧಿ ಮುಕ್ತಾಯವಾಗಿದೆಯಂತೆ. 2020ರ ಮೇ ನಲ್ಲೇ ಕಾರಿನ ಇನ್‌ಶ್ಯುರೆನ್ಸ್ ಎಕ್ಸ್‌ಪೈರ್ ಆಗಿದೆ ಎಂದು ಆರ್‌ಟಿಒ ಆನ್‌ಲೈನ್ ಶೇಖರಿಸಿರುವ ಮಾಹಿತಿಯಿಂದ ತಿಳಿದುಬಂದಿದೆ.
ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ದುಬಾರಿ ನಟನಿಗೆ ಸಣ್ಣ ಕಾರಿಗೆ ವಿಮೆ ಕಟ್ಟಲು ಕಷ್ಟವೇ ? ಇಷ್ಟು ದಿನಗಳಾದರೂ ಟ್ರಾಫಿಕ್ ಪೊಲೀಸರಿಗೆ ಈ ಕಾರು ರಸ್ತೆಯಲ್ಲಿ ಸಿಕ್ಕೇ ಇಲ್ಲವೇ? ಸಿಕ್ಕರೂ ದಂಡ ವಿಧಿಸಿಲ್ಲವೇ ? ಎಂದು ಸಾಮಾಜಿಕ ಜಾಲತಾಣಗಳಲ್ಲಿಜನರು ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ.
ಇದಕ್ಕೆ ಸಮರ್ಥನೆಗೆ ಇಳಿದಿರುವ ವಿಜಯ್ ಫ್ಯಾನ್ಸ್, ಬಹುಶಃ ಕಾರಿನ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗಿಲ್ಲ ಅನಿಸುತ್ತದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ.