ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಕಪಾಳಕ್ಕೆ ಬಾರಿಸುವ ಆಕ್ರೋಶದ ಹೇಳಿಕೆ ನೀಡಿ, ಪೊಲೀಸರಿಂದ ಬಂಧನಕ್ಕೆ ಗುರಿಯಾಗಿ, ಕೊನೆಗೆ ಮಂಗಳವಾರ ತಡರಾತ್ರಿ ಜಾಮೀನು ಪಡೆದಿರುವ ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ ಹಿಂದೆ ಪೊಲೀಸರು ದೊಡ್ಡ ತಯಾರಿಯೇ ಇತ್ತು.
ಜನಾಶೀರ್ವಾದ ಯಾತ್ರೆ ಅಂಗವಾಗಿ ರಾಯಗಢ ಜಿಲ್ಲೆಯಲ್ಲಿ ವಿವಾದಾತ್ಮಕ ಭಾಷಣ ಮುಗಿಸಿ, ಸಚಿವ ರಾಣೆ ಸೀದಾ ತಲುಪಿದ್ದು ರತ್ನಗಿರಿ ಜಿಲ್ಲೆಯ ಸಂಗಮೇಶ್ವರ ತಾಲೂಕಿನ ಗೋಲ್ವಾಲಿ ಗ್ರಾಮಕ್ಕೆ. ಮುಂಬೈ-ಗೋವಾ ಹೆದ್ದಾರಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಆರ್ ಎಸ್ ಎಸ್ ಸ್ಥಾಪಕ ಎಂ.ಎಸ್. ಗೊಲ್ವಾಲ್ಕರ್ ಅವರ ಸ್ಮರಣಾರ್ಥ ವಿಶೇಷ ಸ್ಮಾರಕ ನಿರ್ಮಾಣಗೊಳ್ಳುತ್ತಿದೆ. ಈ ಸ್ಥಳಕ್ಕೆ ಸಾಗುವ ಕಿರಿದಾದ ರಸ್ತೆಯಲ್ಲಿ ಒಂದು ಬಾರಿಗೆ, ಕೇವಲ ಒಂದು ವಾಹನ ಮಾತ್ರವೇ ಸಂಚರಿಸಲು ಸಾಧ್ಯವಿದೆ. ಮುಂಬೈನಿಂದಲೂ ಸುಮಾರು 300 ಕಿ.ಮೀ ದೂರದಲ್ಲಿ ಗ್ರಾಮವಿದೆ.
BIG BREAKING: IPL ಬೆಟ್ಟಿಂಗ್ ಸಂಬಂಧ ಎಂ.ಎಸ್. ಧೋನಿ ವಿರುದ್ಧ ಸುದ್ದಿ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಹಾಗಾಗಿ ರಾಣೆ ಬಂಧನಕ್ಕೆ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿಕೊಂಡು ತಮ್ಮ ಮೇಲೆ ಮುಗಿಬೀಳಲು ಈ ಗ್ರಾಮದಲ್ಲಿ ಆಗುವುದಿಲ್ಲ ಎಂಬ ಸ್ಕೆಚ್ ಸಿದ್ಧಪಡಿಸಿ ಪೊಲೀಸರು ಬಂಧನಕ್ಕೆ ಮುಂದಾಗಿದ್ದಾರೆ. ಬಂಧನದಿಂದ ಗಾಬರಿಗೊಂಡಾಗ ಸಚಿವ ರಾಣೆ ಅವರ ರಕ್ತದೊತ್ತಡದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ.