
ಬಾರ್ಸಿಲೋನಾ ಎಫ್‌ಸಿ ಬಿಟ್ಟು ಪ್ಯಾರಿಸ್ ಸೇಂಟ್ ಜರ್ಮೇಯ್ನ್ (ಪಿಎಸ್‌ಜಿ) ತಂಡಕ್ಕೆ ವರ್ಗಾವಣೆಯಾದ ಆಧುನಿಕ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿರ ಹೊಸ ಜೆರ್ಸಿ ನಂಬರ್ ಸುದ್ದಿ ಮಾಡುತ್ತಿದೆ.
ಪಿಎಸ್‌ಜಿ ಜೊತೆಗೆ ಎರಡು ವರ್ಷಗಳ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಮೆಸ್ಸಿ, ಇದನ್ನು ಮೂರನೇ ವರ್ಷಕ್ಕೆ ವಿಸ್ತರಿಸುವ ಅವಕಾಶವನ್ನೂ ಹೊಂದಿದ್ದಾರೆ. ಬಾರ್ಸಿಲೋನಾ ಪರ 10ನೇ ನಂಬರ್ ಜೆರ್ಸಿಯಲ್ಲಿ ಆಡುತ್ತಿದ್ದ ಮೆಸ್ಸಿ ಪಿಎಸ್‌ಜಿ ಪರವಾಗಿ ಸಹ ಅದೇ ಸಂಖ್ಯೆಯ ಜೆರ್ಸಿ ಧರಿಸುವ ನಿರೀಕ್ಷೆಯಿತ್ತು.
ಕೊರೋನಾ ಆತಂಕದ ನಡುವೆ ಆಗಸ್ಟ್ 19 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ
ಆದರೆ ಎಲ್ಲರಿಗೂ ಅಚ್ಚರಿ ಮೂಡಿಸುವ ನಡೆಯೊಂದರಲ್ಲಿ ಮೆಸ್ಸಿ ಪಿಎಸ್‌ಜಿ ಪರವಾಗಿ ಜೆರ್ಸಿ ನಂಬರ್ 30ನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪಿಎಸ್‌ಜಿ ತಂಡದಲ್ಲಿ ಆಡುತ್ತಿರುವ ಮೆಸ್ಸಿರ ಆಪ್ತ ಸ್ನೇಹಿತ ಹಾಗೂ ಬಾರ್ಸಿಲೋನಾದ ಸಹ ಆಟಗಾರ ನೇಯ್ಮಾರ್ 10ನೇ ನಂಬರಿನ ಜೆರ್ಸಿಯಲ್ಲಿ ಆಡುವ ಕಾರಣದಿಂದ ಮೆಸ್ಸಿಗೆ 19 ಹಾಗೂ 30ರ ಸಂಖ್ಯೆಗಳು ಮಾತ್ರ ಆಯ್ಕೆಗೆ ಲಭ್ಯವಿದ್ದವು.