alex Certify ಬಾಟಲಿಯೊಳಗೆ ಗಮ್ ಅಂಟಿಕೊಳ್ಳದಿರಲು ಕಾರಣವೇನು ? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಟಲಿಯೊಳಗೆ ಗಮ್ ಅಂಟಿಕೊಳ್ಳದಿರಲು ಕಾರಣವೇನು ? ಇಲ್ಲಿದೆ ಒಂದಷ್ಟು ಮಾಹಿತಿ

ಅಂಟು ವಸ್ತುಗಳನ್ನು ಒಟ್ಟಿಗೆ ಅಂಟಿಸಲು ಮಾಧ್ಯಮವಾಗಿ ಬಳಕೆಯಾಗುತ್ತದೆ. ಆದರೆ. ಬಾಟಲಿಯ ಒಳಭಾಗಕ್ಕೆ ಅಂಟು ಏಕೆ ಅಂಟಿಕೊಳ್ಳುವುದಿಲ್ಲ ಎಂಬುದು ದೀರ್ಘಕಾಲದವರೆಗೆ ರಹಸ್ಯವಾಗಿ ಉಳಿದಿದೆ. ನೀವು ಒಮ್ಮೆಯಾದರೂ ಈ ಬಗ್ಗೆ ಯೋಚಿಸಿದ್ದೀರಾ?

ಈ ರೀತಿ ಅಂಟದೇ ಇರಲು ವೈಜ್ಞಾನಿಕ ಕಾರಣವಿದೆ. ಪಾಲಿವಿನೈಲ್ ಅಸಿಟೇಟ್ (ಪಿವಿಎ) ಅಂಟು ಬಾಟಲಿಯೊಳಗೆ ಉಳಿದಿರುವಾಗ, ಗಾಳಿಯು ಕಡಿಮೆಯಿರುತ್ತದೆ, ನೀರು ಆವಿಯಾಗುವುದಿಲ್ಲ. ಈ ಕಾರಣದಿಂದಾಗಿ, ಬಾಟಲಿಗಳ ಒಳಗೆ ಗಮ್ ಅಂಟಿಕೊಳ್ಳುವುದಿಲ್ಲ.

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ಪಿಎವಿಯಲ್ಲಿ ಮುಖ್ಯ ಪದಾರ್ಥಗಳು ಪಾಲಿಮರ್‌ ಎಂಬ ರಾಸಾಯನಿಕ ಸಂಯುಕ್ತಗಳಾಗಿವೆ. ಈ ಪಾಲಿಮರ್‌ಗಳು ಉದ್ದವಾದ ಎಳೆಗಳಾಗಿದ್ದು, ಅವು ಸಾಕಷ್ಟು ಜಿಗುಟಾಗಿ ಉಳಿಯುತ್ತವೆ. ನಾವು ಕಾಗದದ ತುಂಡಿನ ಮೇಲೆ ಅಂಟು ಹಾಕಿದಾಗ, ಅದರಲ್ಲಿರುವ ನೀರು ಗಾಳಿಗೆ ತೆರೆದುಕೊಳ್ಳುತ್ತದೆ. ಇದು ನೀರು ಆವಿಯಾಗಲು ಕಾರಣವಾಗುತ್ತದೆ. ಅಂತಿಮವಾಗಿ ಅಂಟು ಒಣಗಿ ಗಟ್ಟಿಯಾಗುತ್ತದೆ.

ಪಾಲಿವಿನೈಲ್ ಅಸಿಟೇಟ್ ಎಂಬುದು ವಿನೈಲ್ ಅಸಿಟೇಟ್ ‌ನ ಪಾಲಿಮರೀಕರಣದಿಂದ ತಯಾರಿಸಲಾದ ಸಂಶ್ಲೇಷಿತ ರಾಳವಾಗಿದೆ. ಈ ರಾಸಾಯನಿಕವು ಗಾಳಿಯಲ್ಲಿ ನೀರಿನ ಆವಿಯೊಂದಿಗೆ ಪ್ರತಿಕ್ರಿಯಿಸಿದಾಗ ವಸ್ತುಗಳನ್ನು ಒಟ್ಟಿಗೆ ಬಂಧಿಸುತ್ತದೆ.

ಅಂಟು ಎರಡು ಸಂದರ್ಭಗಳಲ್ಲಿ ಅಂಟಿಕೊಳ್ಳುತ್ತದೆ. ಅಂಟು ಬಾಟಲಿಯಿಂದ ಕ್ಯಾಪ್ ತೆಗೆದಿಟ್ಟರೆ ಬಾಟಲಿಯಲ್ಲಿನ ಗಾಳಿಯು ಗಮ್‌ ಅನ್ನು ದಪ್ಪವಾಗಿಸುತ್ತದೆ. ಅಂತಿಮವಾಗಿ ಉತ್ಪನ್ನವು ನಿರುಪಯುಕ್ತವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...