alex Certify ‘ಹಾಲಿನ ಕ್ರೇಟ್’ ಚಾಲೆಂಜ್: ಬಲು ಅಪಾಯಕಾರಿ ಎಂದು ವೈದ್ಯರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಾಲಿನ ಕ್ರೇಟ್’ ಚಾಲೆಂಜ್: ಬಲು ಅಪಾಯಕಾರಿ ಎಂದು ವೈದ್ಯರ ಎಚ್ಚರಿಕೆ

ಸುಮ್ಮನೆ ಕುಳಿತ ಜನರ ಹುಚ್ಚಾಟಕ್ಕೆ ಅಂತ್ಯವೇ ಇಲ್ಲ. ಐಸ್ ಬಕೆಟ್ ಚಾಲೆಂಜ್ ಹೆಸರಿನಲ್ಲಿ ನಡುಗುವ ಚಳಿಯ ನೀರನ್ನು ಮೈಮೇಲೆ ಹೊಯ್ದುಕೊಳ್ಳುವ ಸ್ಪರ್ಧೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ‘ಮಿಲ್ಕ್ ಕ್ರೇಟ್’ ಚಾಲೆಂಜ್ (ಹಾಲಿನ ಕ್ರೇಟ್ ಸ್ಪರ್ಧೆ) ಭಾರಿ ಸದ್ದು ಮಾಡುತ್ತಿದೆ. ಒಂದರ ಮೇಲೊಂದರಂತೆ ಕ್ರೇಟ್‍ಗಳನ್ನು ಮೆಟ್ಟಿಲಿನಂತೆ ಜೋಡಿಸಿ, ಅದನ್ನು ಬರಿಗೈನಲ್ಲಿ ಹತ್ತುವ ಸ್ಪರ್ಧೆ ಇದು.

ಈಗಾಗಲೇ ಇನ್‍ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್‍ಗಳಲ್ಲಿ ಹಲವು ವಿಡಿಯೊಗಳನ್ನು ‘ಮಿಲ್ಕ್ ಕ್ರೇಟ್ ಚಾಲೆಂಜ್’ ಹೆಸರಲ್ಲಿ ಕಾಣಬಹುದು.

BREAKING NEWS: ರಾಜ್ಯದಲ್ಲಿಂದು 1224 ಜನರಿಗೆ ಸೋಂಕು, 22 ಮಂದಿ ಸಾವು

ಆದರೆ, ಈ ಬಗ್ಗೆ ವೈದ್ಯರು ಬಹಳ ಆತಂಕ ವ್ಯಕ್ತಪಡಿಸಿದ್ದಾರೆ. ಮೂಳೆ ಮುರಿದು ಹೋಗುವ ಅಪಾಯದ ಬಗ್ಗೆ ನೆಟ್ಟಿಗರನ್ನು ಎಚ್ಚರಿಸುತ್ತಿದ್ದಾರೆ. ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಮೂಳೆ ತಜ್ಞ ಡಾ. ರಾಜ್ವಿಂದರ್ ಡಿಯೊ ಪ್ರಕಾರ, ಎಷ್ಟೆಲ್ಲ ರೀತಿಯ ಮೂಳೆ ಮುರಿತದ ಪ್ರಕರಣಗಳನ್ನು ವೃತ್ತಿಜೀವನದಲ್ಲಿ ಇದುವರೆಗೂ ಕಂಡಿದ್ದೇವೊ , ಅವೆಲ್ಲವನ್ನು ಕ್ರೇಟ್ ಚಾಲೆಂಜ್ ಮಾಡಲು ಹೋದವರು ಅನುಭವಿಸುವ ಅಪಾಯವಿದೆ ಎಂದಿದ್ದಾರೆ.

ಒಳ್ಳೆಯ ಆರೋಗ್ಯ ವಿಮೆ ಚಾಲ್ತಿಯಲ್ಲಿಟ್ಟುಕೊಂಡವರು ಮಾತ್ರವೇ ಇಂಥ ದುಸ್ಸಾಹಸಗಳನ್ನು ಮಾಡಿರಿ ಎಂದು ಹಲವು ನೆಟ್ಟಿಗರು ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...