alex Certify ಅಬ್ಬಬ್ಬಾ….! ಈ ಮದುವೆ ಪತ್ರಿಕೆಯ ತೂಕವೆಷ್ಟು ಗೊತ್ತಾ..? ಇದರ ಬೆಲೆ ಕೇಳಿದ್ರೂ ಶಾಕ್ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ….! ಈ ಮದುವೆ ಪತ್ರಿಕೆಯ ತೂಕವೆಷ್ಟು ಗೊತ್ತಾ..? ಇದರ ಬೆಲೆ ಕೇಳಿದ್ರೂ ಶಾಕ್ ಆಗ್ತೀರಾ..!

ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯು ಎಷ್ಟು ತೂಕವಿರುತ್ತದೆ. ಸಾಮಾನ್ಯ ಜನರದ್ದಾದ್ರೆ ಒಂದು ಪುಟ್ಟ ಪೇಪರ್ ತರಹದ ಕಾಗದದಲ್ಲಿ ಆಮಂತ್ರಣ ಪತ್ರಿಕೆಯನ್ನು ತಯಾರಿಸಲಾಗುತ್ತದೆ. ಶ್ರೀಮಂತರದ್ದಾದ್ರೆ ಪೆಟ್ಟಿಗೆ ತರಹವಿದ್ದು, ಆಮಂತ್ರಣ ಪತ್ರಿಕೆಯ ಜೊತೆ ಕುಂಕುಮ, ಅರಿಶಿಣ, ಫೋಟೋ ಅಥವಾ ಏನಾದರೂ ವಸ್ತುಗಳನ್ನಿಟ್ಟಿರುತ್ತಾರೆ. ಆದರೆ, ಇಲ್ಲೊಂದು ಮದುವೆಯ ಆಮಂತ್ರಣ ಪತ್ರಿಕೆಯ ತೂಕ ಕೇಳಿದ್ರೆ ಖಂಡಿತ ಬೆಚ್ಚಿ ಬೀಳ್ತೀರಾ..!

ರಾಜ್‌ಕೋಟ್-ಸೌರಾಷ್ಟ್ರದ ಖ್ಯಾತ ಉದ್ಯಮಿ ಮೌಲೇಶಭಾಯ್ ಉಕಾನಿ ಮತ್ತು ಸೋನಾಲ್‌ಬೆನ್ ಉಕಾನಿ ಅವರ ಪುತ್ರ ಜಯ್ ಉಕಾನಿ ಅವರ ವಿವಾಹವು ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ನಡೆಯಲಿದೆ. ಮದುವೆಯ ಆಮಂತ್ರಣವನ್ನು ರಾಜಮನೆತನದ ಶೈಲಿಯಲ್ಲಿ ರಚಿಸಲಾಗಿದೆ. ಕಂಕೋತ್ರಿ (ಗುಜರಾತಿ ಭಾಷೆಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಂಕೋತ್ರಿ ಎಂದು ಹೇಳುತ್ತಾರೆ) 4 ಕೆ.ಜಿ. ಮತ್ತು 280 ಗ್ರಾಂ ತೂಕವನ್ನು ಹೊಂದಿದೆ.

ಭಾರಿ ತೂಕದ ಒಂದು ಮದುವೆ ಆಮಂತ್ರಣ ಪತ್ರಿಕೆಗೆ ಬರೋಬ್ಬರಿ 7,000 ರೂ. ವೆಚ್ಚವಾಗಿದೆ. ಏಳು ಪುಟಗಳನ್ನು ಒಳಗೊಂಡಿರುವ ಆಮಂತ್ರಣ ಪತ್ರಿಕೆ, ಮೂರು ದಿನಗಳವರೆಗೆ ನಡೆಯಲಿರುವ ಮದುವೆಯ ವಿವರಗಳನ್ನು ನೀಡುತ್ತದೆ. ಮೌಲೇಶಭಾಯಿ ಮತ್ತು ಅವರ ಕುಟುಂಬವು ಶ್ರೀಕೃಷ್ಣ, ದ್ವಾರಕಾಧೀಶನಲ್ಲಿ ಅಪಾರ ನಂಬಿಕೆಯನ್ನು ಹೊಂದಿದೆ. ಅವರು ದ್ವಾರಕಾ ದೇವಸ್ಥಾನದ ಟ್ರಸ್ಟಿ ಕೂಡ ಹೌದು. ಹೀಗಾಗಿ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಮತ್ತು ಚಾಕೊಲೇಟ್‌ಗಳು ಆಹ್ವಾನ ಪತ್ರಿಕೆಯ ಪೆಟ್ಟಿಗೆಯನ್ನು ಅಲಂಕರಿಸಿವೆ.

ಮೂರು ದಿನಗಳ ಕಾಲ ನಡೆಯಲಿರುವ ಮದುವೆ ಸಮಾರಂಭದಲ್ಲಿ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಜನಪ್ರಿಯ ಗಾಯಕಿಯರಾದ ಐಶ್ವರ್ಯಾ ಮಜುಂದಾರ್ ಮತ್ತು ಸಚಿನ್-ಜಿಗರ್ ಜೋಡಿಯ ಗಾಯನವೂ ಇದೆ. ಮದುವೆಯ ಔಪಚಾರಿಕ ಔತಣಕೂಟದಲ್ಲಿ ಅತಿಥಿಗಳಿಗೆ ನೀಡಲಾಗುವ ಒಂದು ತಟ್ಟೆಯ ಬೆಲೆ 18,000 ರೂ.ಗಳು.

26 ಎಕರೆಯಲ್ಲಿ ನಿರ್ಮಿಸಲಾಗಿರುವ ಉಮೈದ್ ಭವನ್ ಅರಮನೆಯು ಭಾರತದ ಅತ್ಯಂತ ರಾಜವೈಭೋಗ ಮತ್ತು ದುಬಾರಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಉಮೈದ್ ಭವನ ಅರಮನೆಯಲ್ಲಿ ಒಂದು ರಾತ್ರಿಗೆ ಒಂದು ಕೋಣೆಗೆ ತಗಲುವ ವೆಚ್ಚ ಸುಮಾರು 50,000 ರೂ.ಗಳು. ಕೆಲವು ಸೊಗಸಾದ ಕೊಠಡಿಗಳಿಗೆ 2 ಲಕ್ಷದಿಂದ 3 ಲಕ್ಷ ರೂ.ವರೆಗೆ ವೆಚ್ಚವಾಗುತ್ತವೆ. ಹನಿಮೂನ್ ಸೂಟ್ ಪ್ರತಿ ರಾತ್ರಿ 7.5 ಲಕ್ಷ ರೂ. ವೆಚ್ಚ ತಗಲುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...